BIG NEWS : Free…Free… ಬಿಪಿಎಲ್‌ ಕುಟುಂಬಗಳಿಗೆ ಮತ್ತೊಂದು ಉಚಿತ ಯೋಜನೆ..!!

You are currently viewing BIG NEWS : Free…Free… ಬಿಪಿಎಲ್‌ ಕುಟುಂಬಗಳಿಗೆ ಮತ್ತೊಂದು ಉಚಿತ ಯೋಜನೆ..!!
CM Siddaramaiah with KPCC President And DCM DK Shivakumar

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆಗೆ “ವಾರ್‌ ರೂಮ್‌” ಪ್ರಾರಂಭಿಸಿ, ಡೆಂಗ್ಯೂ ಪೀಡಿತರ ಮೇಲೆ 14 ದಿನಗಳು ನಿಗಾ ವಹಿಸಬೇಕೆಂದು ಆರೋಗ್ಯ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

ಆರೋಗ್ಯ ಸೌಧದಲ್ಲಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗವು ರಾಜ್ಯಮಟ್ಟದ “ವಾರ್‌ ರೂಮ್‌” ಉಸ್ತುವಾರಿ ಹೊಂದಿರಲಿದೆ. ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಅಧಿಕ ಪ್ರಕರಣಗಳು ವರದಿಯಾದ ಪ್ರದೇಶವನ್ನು ಗುರುತಿಸಿ, ವಿವರವನ್ನು ರಾಜ್ಯಮಟ್ಟದ ವಾರ್‌ ರೂಮ್‌ಗೆ ಸಲ್ಲಿಸಬೇಕು. ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಲಾರ್ವಾ ನಾಶ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು ಎಂದು ಹೇಳಿದೆ.

ಡೆಂಗ್ಯೂ ಜ್ವರ ಕ್ಲಿನಿಕ್‌ಗಳನ್ನು ತುರ್ತಾಗಿ ಪ್ರಾರಂಭಿಸಬೇಕು. ಬಿಪಿಎಲ್‌ ಕುಟುಂಬಗಳಿಗೆ ಸೊಳ್ಳೆ ಪರದೆಯನ್ನು ಉಚಿತವಾಗಿ ವಿತರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುತ್ತೋಲೆ ಹೊರಡಿಸಿದ್ದಾರೆ.

Leave a Reply

error: Content is protected !!