LOCAL NEWS : ಕಾಯಕ ನಿಷ್ಠೆ , ವೈರಾಗ್ಯದ ಅರಿವು, ದಾಸೋಹದ ಕಲ್ಪನೆ ನೀಡಿದ ಅಪ್ಪಣ್ಣ : ಶಿಕ್ಷಕ ಎಸ್ ಗುಡ್ಲಾನೂರ್

You are currently viewing LOCAL NEWS : ಕಾಯಕ ನಿಷ್ಠೆ , ವೈರಾಗ್ಯದ ಅರಿವು, ದಾಸೋಹದ ಕಲ್ಪನೆ ನೀಡಿದ ಅಪ್ಪಣ್ಣ : ಶಿಕ್ಷಕ ಎಸ್ ಗುಡ್ಲಾನೂರ್

ಪ್ರಜಾ ವೀಕ್ಷಣೆ ಸುದ್ದಿ :- 

ಕುಕನೂರು : ಅಪ್ಪಣ್ಣವರು ಕಾಯಕ ನಿಷ್ಠೆ , ವೈರಾಗ್ಯದ ಅರಿವು, ದಾಸೋಹದ ಕಲ್ಪನೆಯನ್ನು ತಮ್ಮ ವಚನಗಳಲ್ಲಿ ತಿಳಿಸಿದರು ಎಂದು ಕನ್ನಡ ಶಿಕ್ಷಕ ಶರಣಪ್ಪ ಗುಡ್ಲಾನೂರ ಹೇಳಿದರು.

ಇಂದು ಗವಿಸಿದ್ದೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ’12 ನೇ ಶತಮಾನದಲ್ಲಿ ಆದರ್ಶ ಸಮಾಜ ನಿರ್ಮಾಣಕ್ಕಾಗಿ ದುಡಿದ ಅನೇಕ ಶಿವಶರಣರಲ್ಲಿ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಯಾಗಿದ್ದರು. ಇವರ ಜನ್ಮ ಸ್ಥಳ ಬಸವನಬಾಗೆವಾಡಿ ತಾ/ಮುಸಬಿನಾಳನಲ್ಲಿ ಜನಿಸಿದರು. ಅಪ್ಪಣ್ಣವರು ಕಾಯಕ ನಿಷ್ಠೆ ,ವೈರಾಗ್ಯದ ಅರಿವು, ದಾಸೋಹದ ಕಲ್ಪನೆಯನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಪ್ರತಿ ದಿನ ಬಸವಣ್ಣನವರಿಗೆ ತಾಂಬುಲ ಕೊಡುತ್ತಿದ್ದರು. ಜೊತೆಗೆ ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣನವರ ಆಶಯದಂತೆ ಎಲ್ಲರೂ ಬಾಳಿ ಬದುಕಬೇಕು’ ಎಂದು ಕನ್ನಡ ಶಿಕ್ಷಕ ಶರಣಪ್ಪ ಗುಡ್ಲಾನೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯ ವಿ .ಕೆ .ಬಂಡಿವಡ್ಡರ, ಬಿ ಎಸ್ ಅರಳೆಲೆಮಠ, ವಿ.ಬಿ.ಕಟ್ಟಿ, ಎನ್ .ಟಿ ಸಜ್ಜನ. ಡಿ .ಡಿ ಜೋಗಣ್ಣವರ ಆರ್. ಡಿ .ರಾಠೋಡ ಎಸ್ .ಎಮ್.ಹಿರೇಮಠ ಆರ್ ಬಿ ತಳವಾರ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

error: Content is protected !!