PV ನ್ಯೂಸ್ ಡೆಸ್ಕ್ : ಪ್ರಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರನ್ನ ಪೊಲೀಸರು ದುಬೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸಿದ್ಧ ಪಾಕಿಸ್ತಾನಿ ಗಾಯಕ ‘ರಾಹತ್ ಫತೇಹ್ ಅಲಿ ಖಾನ್ ಅವರ ಮಾಜಿ ಮ್ಯಾನೇಜರ್ ಸಲ್ಮಾನ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಾಕಿಸ್ತಾನ ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ರಾಹತ್ ಫತೇಹ್ ಅಲಿ ಖಾನ್ ಅವರ ಮಾಜಿ ಮ್ಯಾನೇಜರ್ ಸಲ್ಮಾನ್ ಅಹ್ಮದ್ ಗಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಂಡ ಆತನನ್ನ ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರಾಹತ್ ಫತೇಹ್ ಅಲಿ ಖಾನ್ ಯುಎಇಯಲ್ಲಿದ್ದಾಗ ಬುರ್ಜ್ ದುಬೈ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದರು ಎಂದು ತಿಳಿದು ಬಂದಿದೆ.