PV ನ್ಯೂಸ್ ಡೆಸ್ಕ್ : ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಸುಮಾರು 5.25ಲಕ್ಷ ಮೌಲ್ಯದ ಚಿನ್ನಭರಣ ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ.
ಇಂದು (ಜುಲೈ -24 ) ತಳಕಲ್ ಗ್ರಾಮದ ನಿವಾಸಿ ಬಸವರಾಜ ತಂದೆ ಹೇಮರೆಡ್ಡಿ ನರೇಗಲ್ ಎಂಬುವರ ಮನೆಯ ಬೀಗ ಹೊಡೆದು ಖದಿಮರು ಮನೆಗೆ ಖನ್ನ ಹಾಕಿದ್ದಾರೆ. ಬಸವರಾಜ್ ಅವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅದು ಕೂಡ ಮಧ್ಯಾಹ್ನ ದ ವೇಳೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ಹತ್ತಿರದ ಕುಕನೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಇವರ ಮನೆಯಲ್ಲಿ ಒಟ್ಟು 5.25 ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನ ಬೆಳ್ಳಿ ಹಾಗೂ ಆಭರಣಗಳು ಇದ್ದವು, ಅದರಲ್ಲಿ
1) 2 ತೊಲೆಯ ಬಂಗಾರದ 2 ಪಾಟಲಿಗಳು 1,20,000 ರೂಪಾಯಿ,
2) ತೊಲೆಯ ಬಂಗಾರದ 4 ಬಿಲವಾರಗಳು 1,20,000/-
3] ಅರ್ಧ ತೊಲೆಯ ಒಂದು ಚೈನ್ 20,000/-
4] 1. 1/2 ತೊಲೆ ಚೈನ್ 90,000/-
5] 1 ತೊಲೆ ಬಂಗಾರದ 1 ಉಂಗುರು 30,000/-
6] ಅರ್ಧ ತೊಲೆ ಬಂಗಾರದ ಒಂದು ಉಂಗುರ 15,000/-
7] ಒಂದು ತೊಲೆಯ ಬಂಗಾರದ ಸುತ್ತು ಉಂಗುರ 60,000/-
8] 02.5 ಗ್ರಾಂ ತೂಕದ ಬಂಗಾರದ ಗಂಡು & ಡ್ರಾಫ್ಟ್ 5000/-
9] ಅರ್ಧ ತೊಲೆಯ 2 ಜೊತೆ ಬೆಂಡೋಲೆ 40,000/-
10] ಅರ್ಧ ತೊಲೆಯ 1 ಜೊತೆ ರಿಂಗ್ 15,000/-
11] 02.5 ಗ್ರಾಂ ಬಂಗಾರದ ತಾಳಿ & ನತ್ತು 5000/-
12] 5 ತೊಲೆ ಬೆಳ್ಳಿಯ 1 ಕೈಕಡಗೆ 2000/-
13] 3 ತೊಲೆ ಬೆಳ್ಳಿಯ ಗುಂಡಗಡಗಿ 2000/-
14] ಒಂದೂವರೆ ತೊಲೆಯ ಬೆಳ್ಳಿಯ ಉಡದಾರ 1000/-
ಹೀಗೆ ಒಟ್ಟು 5.25 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕದ್ದಿದ್ದಾರೆ. ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ದರೋಡೆ ಕೋರರ ಪತ್ತೆಗಾಗಿ ಪಿಎಸ್ಐ ಗುರುರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.