PV ನ್ಯೂಸ್ ಡೆಸ್ಕ್ : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಪ್ರಸ್ತುತ ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ತವರಿಗೆ ಮರಳಲಿದ್ದಾರೆ. IPL 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ, ಅವರು ಲಕ್ನೋ ಸೂಪರ್‌ಜೈಂಟ್ಸ್ ಅನ್ನು ತೊರೆದು ತಮ್ಮ ರಾಜ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆ ಮರು-ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವದಂತಿಗಳಿವೆ.
ಲಕ್ನೋ ಸೂಪರ್‌ಜೈಂಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಕೆಎಲ್ ರಾಹುಲ್ ನಡುವೆ ಭಿನ್ನಾಭಿಪ್ರಾಯವಿದೆಯಂತೆ. IPL 2024 ರ ಸಂದರ್ಭದಲ್ಲಿ, KL ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿ ಅವಮಾನಿಸಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲಿನ ನಂತರ ತಾಳ್ಮೆ ಕಳೆದುಕೊಂಡ ಸಂಜೀವ್ ಗೊಯೆಂಕಾ, ಟಿವಿ ಕ್ಯಾಮೆರಾಗಳಿವೆ ಎನ್ನುವುದನ್ನೂ ಮರೆತು ರಾಹುಲ್ ಗೆ ಮೈದಾನದಲ್ಲೇ ಛೀಮಾರಿ ಹಾಕಿದ್ದರು. ಕೆಎಲ್ ರಾಹುಲ್ ವಿವರಣೆ ನೀಡಲು ಯತ್ನಿಸಿದರೂ ಸಂಜೀವ್ ಗೋಯೆಂಕಾ ಕಿವಿಗೊಡಲಿಲ್ಲ.
ಇದಕ್ಕೆ ಸಂಬಂಧಿಸಿದ ವಿಡಿಯೋ ಆಗ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಂಜೀವ್ ಗೋಯೆಂಕಾ ಅವರ ವರ್ತನೆಗೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.ಈ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಲಕ್ನೋ ತಂಡವನ್ನು ತೊರೆಯಲಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ತೆರಳಲು ಮುಂದಾಗಿದ್ದಾರೆ ಎಂಬ ವರದಿಗಳಿವೆ.
ವಾಸ್ತವವಾಗಿ, ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಆರ್‌ಸಿಬಿಯೊಂದಿಗೆ ಪಾದಾರ್ಪಣೆ ಮಾಡಿದ್ದರು. ಅವರು 2013 ರಿಂದ 2016 ರವರೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಗಾಯದ ಕಾರಣ 2017 ರ ಋತುವನ್ನು ಕಳೆದುಕೊಂಡ ನಂತರ, ಅವರು 2018 ರ ಮೆಗಾ ಹರಾಜಿಗೆ ಮುಂಚಿತವಾಗಿ ಪಂಜಾಬ್ ತಂಡಕ್ಕೆ ಬದಲಾಯಿಸಿದರು. ನಾಲ್ಕು ವರ್ಷಗಳ ಕಾಲ ಪಂಜಾಬ್ ಕಿಂಗ್ಸ್‌ಗಾಗಿ ಆಡಿದ ನಂತರ, ಅವರು IPL 2022 ರ ಮೆಗಾ ಹರಾಜಿನ ಮೊದಲು ಲಕ್ನೋ ಸೂಪರ್‌ಜೈಂಟ್ಸ್‌ಗೆ ತೆರಳಿದರು.
ಆರ್‌ಸಿಬಿಗೆ ಮರಳಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಂಜೀವ್ ಗೋಯೆಂಕಾ ಅವರೊಂದಿಗಿನ ಎನ್ಕೌಂಟರ್ ಸಂದರ್ಭದಲ್ಲೂ ಆರ್‌ಸಿಬಿ ಅಭಿಮಾನಿಗಳು ಕೆಎಲ್ ರಾಹುಲ್ ಪರ ನಿಂತಿದ್ದರು. ಅವರು ರಾಹುಲ್‌ಗೆ ಆರ್‌ಸಿಬಿಗೆ ಬರುವಂತೆ ಕೇಳಿಕೊಂಡರು. ಈಗ ಕೆ.ಎಲ್.ರಾಹುಲ್ ಆ ದಿಸೆಯಲ್ಲಿ ಯೋಚಿಸುತ್ತಿರುವಂತಿದೆ. ಹಾಗೆ ನಡೆದರೆ ಫಾಫ್ ಡುಪ್ಲೆಸಿಸ್ ಬದಲಿಗೆ ಕೆಎಲ್ ರಾಹುಲ್ ಆರ್‌ಸಿಬಿ ನಾಯಕರಾಗುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಜೊತೆ ಓಪನ್ ಮಾಡಬಹುದು. ಕೆಎಲ್ ರಾಹುಲ್ ಅವರನ್ನು ತೆಗೆದುಕೊಳ್ಳಲು ಆರ್‌ಸಿಬಿ ಕೂಡ ಸಿದ್ಧವಾಗಿದೆಯಂತೆ.
ಈ ಲೇಖನವನ್ನು ಪೇಸ್‌ಬುಕ್ ವಾಲ್ ಆದಂತಹ “ಸ್ಪೋರ್ಟ್ ಕನ್ನಡ” ಇಂದ ತಗೆದುಕೊಳ್ಳಲಾಗಿದೆ.