PV ನ್ಯೂಸ್ ಡೆಸ್ಕ್
ಕುಕನೂರು : ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ “ಕರ್ನಾಟಕ ವಿದ್ಯುತ್ ಮಂಡಳಿ (karnataka electricity board-KEB)” ಯನ್ನು “ಕಾರ್ಯ ಮತ್ತು ಪಾಲನಾ ವೃತ್ತ” (Operations and Maintenance O&M) ಉಪವಿಭಾಗವನ್ನಾಗಿ ಕುಕನೂರು ನಗರಕ್ಕೆ ಮಂಜೂರು ಮಾಡಲಾಗಿದೆ ಎಂದು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪಧಾನ ಕಛೇರಿಯಿಂದ ಅಧಿಕೃತ ಮಾಹಿತಿ ಬಂದಿದೆ.
