PV ನ್ಯೂಸ್ ಡೆಸ್ಕ್- ಬಳ್ಳಾರಿ : ಉದ್ಯೋಗ ಅರಸುತ್ತಿರುವವರಿಗೆ ಖುಷಿ ಸುದ್ದಿ ಇದ್ದು, ಅಂಚೆ ಇಲಾಖೆಯಲ್ಲಿ “ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ” ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನಿಯುಕ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಕ್ಕಾಗಿ ಅಗಸ್ಟ್ 05 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು
ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಈ ಹುದ್ದೆಗೆ ಸಂದರ್ಶನವು ಬಳ್ಳಾರಿ ನಗರದ ಕೋಟೆ ಆವರಣದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಅರ್ಹತೆಗಳು :-
1) ಕನಿಷ್ಠ 18 ವಯಸ್ಸಿನವರಾಗಿರಬೇಕು, ಗರಿಷ್ಠ ವಯೋಮಿತಿ ಇರುವುದಿಲ್ಲ.
2) ವಿಮಾ ಉತ್ಪನ್ನ ಮಾರಾಟ ಮಾಡುವ ಅನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
3) ಅಭ್ಯರ್ಥಿಯು 5000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು.
4) 5000 ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, PUC ಉತ್ತೀರ್ಣರಾಗಿರಬೇಕು.
5) ಇತರೆ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು.
ನೇರ ಪ್ರತಿನಿಧಿ ಹುದ್ದೆ:-
1) ನೇರ ಪ್ರತಿನಿಧಿ ಹುದ್ದೆಗೆ ನಿರುದ್ಯೋಗಿ
2) ಸ್ವಯಂ ಉದ್ಯೋಗ ನಿರತ ಯುವಕರು
3) ಮಾಜಿ ವಿಮಾ ಕಂಪನಿಗಳ ಸಲಹೆಗಾರರು
4) ಅಂಗನವಾಡಿ ಕಾರ್ಯಕರ್ತೆರು
5) ಮಹಿಳಾ ಮಂಡಳಿಯ ಕಾರ್ಯಕರ್ತೆಯರು
6) ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅರ್ಹರು
ಫೀಲ್ಡ್ ಆಫೀಸರ್ ಹುದ್ದೆ:-
1) ಫೀಲ್ಡ್ ಆಫೀಸರ್ ಹುದ್ದೆಗೆ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು, ನಿವೃತ್ತ ಗ್ರಾಮೀಣ ಅಂಚೆ ಸೇವಕರು ಸರ್ಹರಾಗಿರುತ್ತಾರೆ.
2) ಸಂದರ್ಶನ ಮೂಲಕ ಆಯ್ಕೆಯಾದ ಅಭ್ಯರ್ಥಿಯು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ 5000 ರೂ.ಗಳನ್ನು ಭದ್ರತಾ ಠೇವಣಿ ಇಡಬೇಕು.
3) ಆಯ್ಕೆಯಾದ ನೇರ ಪ್ರತಿನಿಧಿ, ಫೀಲ್ಡ್ ಆಫೀಸರ್‌ಗಳಿಗೆ ತಮ್ಮ ವ್ಯವಹಾರ ತಕ್ಕಂತೆ ಸೂಕ್ತ ಕಮೀಷನ್ ಇದ್ದು, ನಿಗದಿತ ವೇತನವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅಭಿವೃದ್ಧಿ ಅಧಿಕಾರಿ ಮಾರುತಿ.ವಿ.ಯು ಅವರ ಮೊಬೈಲ್ ಸಂಖ್ಯೆ 9481694420 ಅಥವಾ ಅಂಚೆ ಅಧೀಕ್ಷಕರ ಕಾರ್ಯಾಲಯದ ದೂ.08392-266768ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.