PV ನ್ಯೂಸ್ ಡೆಸ್ಕ್ : 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆ”ಯಲ್ಲಿ ಭಾರತೀಯರು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ನಮ್ಮ ಭಾರತೀಯ ಶೂಟರ್‌ಗಳು ನಮ್ಮನ್ನು ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ!, ಭಾರತಕ್ಕೆ ಅತೀವ ಸಂತೋಷವಾಗಿದೆ” ಎಂದು ಹೇಳಿದರು. ನಮ್ಮ ಶೂಟರ್ ಗಳು ನಮಗೆ ಹೆಮ್ಮೆ ತರುತ್ತಲೇ ಇದ್ದಾರೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 2ನೇ ಪದಕವನ್ನು ತಂದುಕೊಟ್ಟಂತ ಮನು ಭಾಕರ್, ಸರಬ್ ಜಿತ್ ಸಿಂಗ್ ಗೆ ಮೋದಿ ಅಭಿನಂದನೆ ತಿಳಿಸಿದ್ದಾರೆ.
#Cheer4Bharat