LOCAL NEWS : ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದಷ್ಟು ಬಾಳು ಬಂಗಾರ : ಹಿರಿಯ ಸಾಹಿತಿ ಬೋಜರಾಜ್ ಸೊಪ್ಪಿಮಠ

You are currently viewing LOCAL NEWS : ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದಷ್ಟು ಬಾಳು ಬಂಗಾರ : ಹಿರಿಯ ಸಾಹಿತಿ ಬೋಜರಾಜ್ ಸೊಪ್ಪಿಮಠ

PV ನ್ಯೂಸ್‌ ಡೆಸ್ಕ್‌- ಕುಕನೂರು : ” ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದಷ್ಟು ಬಾಳು ಬಂಗಾರ ವಾಗಲಿದೆ. ವ್ಯಸನದ ಬಗ್ಗೆ ಡಾ. ಶ್ರೀ ಮಾಹಾಂತ ಶಿವಯೋಗಿಗಳು ತಮ್ಮ ಜೀವನದೂದಕ್ಕೂ ಇವುಗಳಿಂದ ದೂರವಿರಿ ಎಂದು ಸಮಾಜಕ್ಕೆ ಒಳ್ಳಯ ಸಂದೇಶ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಬೋಜರಾಜ್ ಸೊಪ್ಪಿಮಠ ಹೇಳದರು.

ಇಂದು ಪಟ್ಟಣದ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ನಡೆದ ““ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ‘ವ್ಯಸನ ಮುಕ್ತ ದಿನ” ಎಂಬ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, “ಒಂದು ಸಮೃದ್ದ ಹಾಗೂ ಶ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ಈಗಿನ ಯುವಕ-ಯುವತಿಯರ ಬಹುಮುಖ್ಯ ಪಾತ್ರ ಇದೆ. ಡಾ. ಶ್ರೀ ಮಾಹಾಂತ ಶಿವಯೋಗಿಗಳು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ವಿದ್ಯಾರ್ಥಿಗಳಾದ ನೀವು ಹೊಗಬೇಕಾದ ಅನಿರ್ಯತೆ ಇದೆ ಎಂದು ಸೊಪ್ಪಿಮಠ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗ್ರೆಡ್-2 ತಹಶೀಲ್ದಾರ್ ಮುರಳಿಧರ್ ರಾವ ಕುಲರ್ಕಣಿ ಅವರು ಮಾತನಾಡಿ, ‘ಅರಿವೆಯ ಚೀಲವನ್ನು ಹಿಡಿದು ಮನೆಯಿಂದ ಮನೆಗೆ ಹೋಗಿ ಸಮಾಜವನ್ನೇ ಹಾಳು ಮಾಡುವ ದುರ್ವ್ಯಸನ ಮತ್ತು ದುಷ್ಚಟಗಳ ದಾಸ್ಯದಿಂದ ಜನಸಾಮಾನ್ಯರನ್ನು ಹೊರತರಲು ಜನರ ಎಲ್ಲಾ ದುಶ್ಚಟಗಳ ವಸ್ತುಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿಸಿದವರು ಡಾ.ಮಹಾಂತ ಶಿವಯೋಗಿಗಳು ಅವರು ಮಾಡಿದ ಹಲವಾರು ಸಮಾಜ ಸುಧಾರಣೆ ಕಾರ್ಯಗಳೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವೂ ಸಂಪೂರ್ಣವಾಗಿ ತೊಡಗಿಸಿಕೊಂಡವರು ಎಂದು ತಿಳಿಸಿದರು.

ಈ ಕಾರ್ಯಕ್ರಮ ಅರಂಭವಾಗುವ ಮುಂಚೆ ‘ವ್ಯಸನ ಮುಕ್ತ ದಿನ” ಪ್ರಯುಕ್ತ ಪಟ್ಟಣದ ಗುದ್ನೆಪ್ಪನಮಠದ ರಥ ಬಿದಿಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಅದೇ ರೀತಿಯಲ್ಲಿ ಕಾರ್ಯಕ್ರಮದಲ್ಲಿ ವ್ಯಸನ ಮುಕ್ತ ದಿನದ ಪ್ರತಿಜ್ಞಾನ ವಿಧಿಯನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ದಂತ ವೈದ್ಯಾಧಿಕಾರಿ ಡಾ. ಸುಶ್ಮಾ ಅವರಿಂದ ‘ವ್ಯಸನ ಮುಕ್ತ ದಿನ’ ತುಂಬಾಕು ಪಾನಮಸಾಲ, ಗುಟ್ಕಾ, ಸಿಗರೇಟು ವ್ಯಸನ ಮಾಡುತ್ತಿರುವವರಿಗೆ ಮುಂದೆ ಏನಾಗಬಹುದು ಎಂಬುವುದರ ಕುರಿತು ಹಾಗೂ ಇತ್ಯಾದಿ ದುರ್ವ್ಯಸನ ಹಾಗೂ ದುಶ್ಚಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಈ ವೇಳೆಯಲ್ಲಿ ಶ್ರೀನಾಥ್ ದೇಸಾಯಿ, ಶಿರಸ್ತೇದಾರ್ ಮುಸ್ತಾಫ್, ನಿತೀಶ್ ತೊಟಗಾರಿಕೆ ಇಲಾಖೆ, ಕೆ ಎನ್. ಕುಂಬಾರ್‌ ಆರೋಗ್ಯ ಇಲಾಖೆ, ಪ್ರಾಂಶುಪಾಲರು ಈಶಪ್ಪ ಮಾಳಗಿ, ಕಾರ್ಯಕ್ರಮದ ನಿರೂಪಣೆಯನ್ನು ಅಥಿತಿ ಉಪನ್ಯಾಸಕ, ಪತ್ರಕರ್ತ ಮಂಜುನಾಥ್ ಅಂಗಡಿ ನಡೆಸಿಕೊಟ್ಟರು, ವಂದಾನಾರ್ಪಣೆ ಯನ್ನು ದಫೇಧಾರ್‌ ಶಿಕ್ಷಕರು ನೆರವರಿಸಿದರು.

Leave a Reply

error: Content is protected !!