LOCAL N EWS : ‘ಅಭಿವೃದ್ದಿ ಕಾರ್ಯಕ್ಕೆ ಭೂಮಿ ಕೊರತೆ ಇದ್ದು, ಜಮೀನು ಕೊಟ್ಟು ಸಹಕರಿಸಿ’ : ಶಾಸಕ ರಾಯರೆಡ್ಡಿ ಮನವಿ..!!

You are currently viewing LOCAL N EWS : ‘ಅಭಿವೃದ್ದಿ ಕಾರ್ಯಕ್ಕೆ ಭೂಮಿ ಕೊರತೆ ಇದ್ದು, ಜಮೀನು ಕೊಟ್ಟು ಸಹಕರಿಸಿ’ : ಶಾಸಕ ರಾಯರೆಡ್ಡಿ ಮನವಿ..!!

ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ & ಶಾಸಕ ಬಸವರಾಜ ರಾಯರೆಡ್ಡಿ ಅವರಿಂದ ಎಪಿಎಂಸಿ ಪ್ರರಾಂಗಣದಲ್ಲಿ “ಕೋಲ್ಡ್ ಸ್ಟೋರೆಜ್” ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಭಗೀರಥ ಭವನದಲ್ಲಿ “ಕಾರ್ಯ ಮತ್ತು ಪಾಲನಾ ವೃತ್ತ” ದ ಉಪವಿಭಾಗ (ಎಇಇ) ಕಚೇರಿ ಉದ್ಘಾಟನೆ.

PV ನ್ಯೂಸ್ ಡೆಸ್ಕ್-ಕುಕನೂರು : ‘ಲೋಕಸಭಾ ಚುನಾವಣೆಯ ಬಳಿಕ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳು ಆರಂಭವಾಗಿವೆ ಆದರೆ ಮಹತ್ವದ ಯೊಜನೆಗಳಿಗೆ ಸರಿಯಾದ ರೀತಿಯಲ್ಲಿ ಭೂಮಿ ದೊರಕದಿರುವುದು ಬೇಸರ ತಂದಿದೆ, ಹಾಗಾಗಿ ದಯಮಾಡಿ ಪ್ರಮುಖ ಅಭಿವೃದ್ದಿ ಕಾರ್ಯಗಳಿಗೆ ಜಮೀನು ನೀಡಿ’ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಬಸವರಾಜ ರಾಯರೆಡ್ಡಿಯವರು ರೈತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ “ವಿವಿಧ ಅಭಿವೃದ್ದಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆ ಕಾರ್ಯಕ್ರಮ”ವನ್ನು ಉದ್ದೇಶಿಸಿ ಮಾತನಾಡಿದ ಅವರು,’ಚುನಾವಣೆ ಇದ್ದ ಕಾರಣ 4 ತಿಂಗಳು ರಾಜ್ಯದಲ್ಲಿ ಅಭಿವೃದ್ದಿ ಕಾಮಗಾರಿಗಳು ಸ್ಥಗಿತಿಗೊಂಡಿದ್ದು, ಇದೀಗ ಮತ್ತೆ ಅಭಿವೃದ್ದಿ ಕೆಲಸಗಳತ್ತ ನಾವು ಮುಖ ಮಾಡಿದ್ದೇವೆ. ಈ ಸಮಯದಲ್ಲಿ ರಾಜ್ಯದಲ್ಲೇ ಯಾರು ತರದ ಯೊಜನೆಗಳು ನಮ್ಮ ಕ್ಷೇತ್ರಕ್ಕೆ ನಾನು ತಂದಿದ್ದೇನೆ. ಅದನೇಂದರೆ ರೈತರ ಅನುಕೂಲಕ್ಕಾಗಿ 970 ಕೋಟಿ ಅನುದಾನದಲ್ಲ್ಲಿ ಒಟ್ಟು 38 ಕೆರೆ ತುಂಬಿಸುವ ವಿಶೇಷ ಯೊಜನೆವಿದ್ದು, ಈ ಯೊಜನೆಗೆ ತಾಲೂಕಿನಲ್ಲಿ ಒಟ್ಟು 2,000 ಎಕರೆ ಜಮೀನು ಬೇಕಾಗಿದೆ, ಆದರೆ ಇಲ್ಲಿವರೆಗೆ 1,400 ಎಕರೆ ಭೂಮಿ ಮಾತ್ರ ಲಭ್ಯವಿದೆ ಎಂದು ತಿಳಿದು ಬಂದಿದೆ. ಇನ್ನುಳಿದ ರೈತರಿಗೆ ಮನವರಿಕೆ ಮಾಡಲಾಗುತ್ತಿದೆ. ಜಮೀನು ಸಿಗುತ್ತಿಲ್ಲ, ಸಾವಿರ ಕೋಟಿ ಅನುದಾನ ವಾಪಾಸ್ ಹೋಗುವ ಮುನ್ನ ಜಮೀನು ಕೊಟ್ಟು ಸಹಕರಿಸಿ’ ಎಂದು ರೈತರಲ್ಲಿ ಕೈ ಮುಗಿದು ಮನವಿ ಮಾಡಿದರು.

ಇದೇ ವೇಳೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಎಪಿಎಂಸಿ ಪ್ರಾಂಗಣದಲ್ಲಿ 7.30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತೀರುವ “ಕೋಲ್ಡ್ ಸ್ಟೋರೆಜ್” ಕಾಮಗಾರಿಗೆ ಗುದ್ದಲಿ ಪೂಜೆ ನೇರವೆರಿಸಿದರು.

ಭಗೀರಥ ಭವನದಲ್ಲಿ “ಕಾರ್ಯ ಮತ್ತು ಪಾಲನಾ ವೃತ್ತ” ದ ಉಪವಿಭಾಗ (ಎಇಇ) ಕಚೇರಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಇದರ ಎಂ.ಡಿ ರವೀಂದ್ರ ಕರಿಯಣ್ಣನವರ್, ತಹಶೀಲ್ದಾರ್ ಹೆಚ್ ಪ್ರಾಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಪಾಟೀಲ್ ಬಿರಾದರ್, ಕಾರ್ಯಕ್ರಮದ ಅಧ್ಯಕ್ಷತೆ ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಖಾಸಿಂ ಸಾಬ್ ತಳಕಲ್ ವಹಿಸಿದ್ದರು. ಅಲ್ಪಸಂಖ್ಯಾತ ಇಲಾಖೆಯ ಉಪ ನಿರ್ದೇಶಕ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಹನುಮಂತ್ ಗೌಡ ಚೆಂಡೂರು, ಮುಖಂಡರಾದ ಕೆರಿಬಸಪ್ಪ ನಿಡಗುಂದಿ, ಬಿ ಎಂ ಶಿರೂರು, ವೀರನಗೌಡ ಪೊಲೀಸ್ ಪಾಟೀಲ್, ಸತ್ಯ ನಾರಾಯಣಪ್ಪ ಹರಪನಹಳ್ಳಿ, ಸಂಗಮೇಶ ಗುತ್ತಿ, ರಾಮಣ್ಣ ಬಜೇಂತ್ರಿ, ಸಿದ್ದಯ್ಯ ಕಳ್ಳಿಮಠ, ರೆಹಮಾನ್ ಸಾಬ್ ಮಕ್ಕಪ್ಪನವರ್, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ್ ಕಡೇಮನಿ, ಸಾವಿತ್ರಿ ಗೊಲ್ಲರ, ಪರಿದಾ ಬೇಗಂ, ಗಿರಿಜಾ ಸಂಗಟಿ, ಜೆಸ್ಕಾಂ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

Leave a Reply

error: Content is protected !!