BREAKING : ಭಾರಿ ಮೌಲ್ಯದ ಕಳ್ಳತನದ 13 ಪ್ರತ್ಯೇಕ ಪ್ರಕರಣಗಳು : 16 ಆರೋಪಿಗಳು ಬಂಧನ..!!

You are currently viewing BREAKING : ಭಾರಿ ಮೌಲ್ಯದ ಕಳ್ಳತನದ 13 ಪ್ರತ್ಯೇಕ ಪ್ರಕರಣಗಳು : 16 ಆರೋಪಿಗಳು ಬಂಧನ..!!

PV ನ್ಯೂಸ್ ಡೆಸ್ಕ್- ಕೊಪ್ಪಳ : ಜಿಲ್ಲೆಯಲ್ಲಿ ಪ್ರತ್ಯೇಕ 13 ಪ್ರಕರಣಗಳಲ್ಲಿ ಒಟ್ಟು 8.39 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದು, ಇದರಲ್ಲಿ ಪ್ರಮುಖವಾಗಿ ಭಾಗಿಯಾದ 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ರಾಮ್ ಎಲ್ ಅರೆಸಿದ್ದಿ ಹೇಳಿದರು.

ಇಂದು ಸಂಜೆ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಪಿ ಅವರು, ‘ಜಿಲ್ಲೆಯ ಯಲಬುರ್ಗಾ, ಕುಕನೂರು, ಕುಷ್ಟಗಿ, ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಭಾರಿ ಮೌಲ್ಯದ ಕಳ್ಳತನದ ಬಗ್ಗೆ ದೂರು ಬಂದಿತ್ತು. ಇದನ್ನು ಆದರಿಸಿ ನಮ್ಮ ಅಧಿಕಾರಿಗಳು ಪ್ರತ್ಯೇಕ 13 ಪ್ರಕರಣಗಳನ್ನು ಭೇದಿಸಿದ್ದು, ಈ ಪ್ರಕರಣಗಳಲ್ಲಿ ಭಾಗಿಯಾದ ಪ್ರಮುಖ 16 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ನಗದು ಮೌಲ್ಯ ಬರೋಬರಿ 8.39 ಲಕ್ಷ ರೂಪಾಯಿ ನಗದನ್ನ ವಶಪಡಿಸಿಕೊಂಡಿದ್ದು, ಇದರೊಂದಿಗೆ ಎರಡು ಬೈಕ್ ಗಳು ಹಲವಾರು ಆಭರಣಗಳು, ಮೊಬೈಲ್ ಫೋನ್ಸ್ಗಳು , ಇತ್ಯಾದಿಗಳನ್ನ ವಶಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಪ್ರಜಾವೀಕ್ಷಣೆ ಸುದ್ದಿ ಜಾಲ 

 

Leave a Reply

error: Content is protected !!