ಫೆಬ್ರವರಿಯೊಳಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಆಯುಕ್ತರ ಡೆಡ್ ಲೈನ್.!!
PV ನ್ಯೂಸ್ ಡೆಸ್ಕ್ ಬೆಂಗಳೂರು : ಸುಪ್ರೀಮ್ ಕೋರ್ಟ್ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಉತ್ಸುಕವಾಗಿದ್ದು ಅದಕ್ಕೆ ಸಂಬಂದಿಸಿದ ಮಹತ್ವದ ಅಪ್ಡೇಟ್ ಅನ್ನು ಇಂದು ಕೊಟ್ಟಿದೆ.
ಮುಂಬರುವ ಫೆಬ್ರವರಿ ತಿಂಗಳ ಒಳಗೆಯೇ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು ಇಲ್ಲವಾದರೆ ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ರಾಜ್ಯ ಸರ್ಕಾರವನ್ನ ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯ ಚುನಾವಣೆ ಆಯೋಗದ ನೂತನ ಆಯುಕ್ತ ಜಿ ಎಂ ಸಂಗ್ರೇಶಿ ಅವರು ಬೆಂಗಳೂರು ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಅವಧಿ ಮುಗಿದು ಈಗಾಗಲೇ 4 ವರ್ಷವಾಗಿದೆ, ಇನ್ನೂ 6 ತಿಂಗಳು ಅಂದರೆ ಫೆಬ್ರವರಿ ಒಳಗೆ ಚುನಾವಣೆ ಬಿಬಿಎಂಪಿ, ಪಾಲಿಕೆ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯದೆ ಇದ್ದರೆ 15 ನೇ ಹಣಕಾಸಿನ ಸುಮಾರು 2000 ಕೋಟಿ ಹಣ ವಾಪಸ್ಸು ಹೋಗಲಿದೆ. ಚುನಾವಣೆ ನಡೆದರೆ ಮಾತ್ರವೇ ಆ ಹಣವು ಸ್ಥಳೀಯ ಸಂಸ್ಥೆಗಳಿಗೆ ಉಳಿಯಲಿದೆ. ಹೀಗಾಗಿ ಆರು ತಿಂಗಳು ಒಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನ ಎಚ್ಚರಿಸಿದ್ದಾರೆ.
ಆಯೋಗದಿಂದ ಸುಪ್ರೀಮ್ ಕೋರ್ಟ್ ಗೆ ಸಲ್ಲಿಕೆಯಾಗಿರುವ ಎರಡು ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಎರಡೂ ಅರ್ಜಿಯ ವಿಚಾರಣೆ ಪೂರ್ಣಗೊಂಡ ತಕ್ಷಣವೇ ಆಯೋಗವು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ. ಎಂ,ಸಂಗ್ರೇಶ್ ಅವರು ತಿಳಿಸಿದ್ದಾರೆ