PV ನ್ಯೂಸ್ ಡೆಸ್ಕ್- ಕುಕನೂರು : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಮೂಲ್ಯವಾದ ಜೀವ ರಕ್ಷಣೆ ಮಾಡಿಕೊಳ್ಳಬೇಕು. ಇತ್ತೀಚಿಗೆ ಹೆಲ್ಮೆಟ್ ಇಲ್ಲದ ಕಾರಣ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಹಲವು ಸಾವು-ನೋವುಗಳು ಸಂಭವಿಸಿವೆ. ಈ ಕುರಿತು ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಪೊಲೀಸ್ ಇಲಾಖೆ ಕೈಗೆತ್ತಿಕೊಂಡಿದ್ದು, ಹೆಲ್ಮೆಟ್ ಧರಿಸದೇ ಇದ್ದಲ್ಲಿ ಪೊಲೀಸರಿಂದ ದಂಡ ವಿಧಿಸುವುದು ನಿಶ್ಚಿತ ಎಂದು ಹೇಳಬಹುದು. ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇದೀಗ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾದ್ಯಂತ “ಹೆಲ್ಮೆಟ್-ಕಡ್ಡಾಯ” ಎಂಬ ಅಭಿಯಾನವನ್ನು ಆರಂಭಿಸಿದ್ದು, ಇಂದು ಕುಕನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಇದರ ಪ್ರಯುಕ್ತ ಇಂದು ಕುಕನೂರು ಪಟ್ಟಣದ ಗುದ್ನೇಪ್ಪನ ಮಠದ ಶ್ರೀ ಸೇವಾಲಾಲ್ ವೃತ್ತದ ಬಳಿ ಪಿಎಸ್‌ಐ ಟಿ.ಗುರುರಾಜ್ ನೇತೃತ್ವದಲ್ಲಿ “ಹೆಲ್ಮೆಟ್-ಕಡ್ಡಾಯ” ಹಾಗೂ ಗೂಡ್ಸ್ ವಾಹನ ಸೇರಿ ಎಲ್ಲಾ ವಾಹನಗಳ ವಿಮೆ ಪರಿಶೀಲನೆ ಮಾಡಲಾಗುತ್ತಿದೆ.
ಈ ವೇಳೆಯಲ್ಲಿ ಹೆಲ್ಮೆಟ್ ಧರಿಸದೆ ಇವರು ದ್ವಿಚಕ್ರ ವಾಹನ ಸಾವಾರರಿಗೆ ತಿಳಿ ಹೇಳಿ ದಂಡ ಹಾಕಲಾಗುತ್ತಿದೆ. ಇದರ ಜೊತೆಗೆ ಗೂಡ್ಸ್ ವಾಹನಗಳು ಸೇರಿ ಬೃಹತ್ ಲಾರಿ, ಟಿಪ್ಪರ್‌ಗಳ ವಿಮೆ ಸ್ಥಿತಿಯನ್ನು ನೋಡಿ. ಸರಿಯಾಗಿ ದಾಖಲೆಗಳು ಇಲ್ಲದ್ದಿದ್ದರೆ ಅಂತವರ ವಿರುದ್ಧ ಕ್ರಮ ಹಾಗೂ ದಂಡ ವಿಧಿಸಲಾಗುತ್ತಿದೆ.
ಇಂದು “ನಾಗರ ಪಂಚಮಿ ಹಬ್ಬ” ಇರುವುದರಿಂದ ಜನರು ಹೆಚ್ಚಾಗಿ ವಾಹನಗಳಲ್ಲಿ ಓಡಾಡುವುದು ಹೆಚ್ಚಾಗಿರುತ್ತದೆ. ಇಂದು ವಿಶೇಷವಾಗಿ ನಾಗ ದೇವರಿಗೆ ಪೋಜೆ-ಪುನಸ್ಕಾರ ಮಾಡಲು ತಮ್ಮ ತಮ್ಮ ಹೊಲ ಗದ್ದೆಗಳಿಗೆ ಹೋಗುವವರಿಗೆ ಸ್ವಲ್ಪ ಮಟ್ಟದಲ್ಲಿ ತೊಂದರೆ ಆಯಿತು ಎಂದು ಹೇಳಬಹುದು.
ಈ ಕುರಿತು ಪಿಎಸ್‌ಐ ಟಿ.ಗುರುರಾಜ್ ಪ್ರತಿಕ್ರಿಯಿಸಿದ್ದು, ‘ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು, ಇದರಿಂದ ಜನರು ತಮ್ಮ ಅಮೂಲ್ಯವಾದ ಜೀವ-ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇಲಾಖೆಯಿಂದ ಈಗಾಗಲೇ ಸಾಕಷ್ಟು ಮುಂಜಾಗೃತೆ ಕ್ರಮಗಳಿದ್ದು ಕೂಡ, ಜನ ಸಾಮನ್ಯರು ಕವಿಗೊಡುತ್ತಿಲ್ಲ. ಹಾಗಾಗಿ ರಸ್ತೆ ಅಪಘಾತಗಳನ್ನು ತಡೆಯಲು ಇಂತಹ ಅಭಿಯಾನಗಳು ಅಗತ್ಯವಿದೆ. “ಹೆಲ್ಮೆಟ್-ಕಡ್ಡಾಯ” ಹಾಗೂ ಗೂಡ್ಸ್ ವಾಹನ ಸೇರಿ ಎಲ್ಲಾ ವಾಹನಗಳ ವಿಮೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದರು.