BIG BREAKING : ತುಂಗಭದ್ರ ಆಣೆಕಟ್ಟು ಗೇಟ್ ನಂಬರ್ 19ಕ್ಕೆ ಹಾನಿ : ಭಯದ ವಾತಾವರಣದಲ್ಲಿ ಸಾರ್ವಜನಿಕರು!!

You are currently viewing BIG BREAKING : ತುಂಗಭದ್ರ ಆಣೆಕಟ್ಟು ಗೇಟ್ ನಂಬರ್ 19ಕ್ಕೆ ಹಾನಿ : ಭಯದ ವಾತಾವರಣದಲ್ಲಿ ಸಾರ್ವಜನಿಕರು!!

ಕೊಪ್ಪಳ : ಕೊಪ್ಪಳ ರಾಯಚೂರು ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕೆಳಭಾಗದ ಜೀವನಾಡಿಯಾಗಿರುವ ತುಂಗಭದ್ರಾ ಆಣೆಕಟ್ಟಿನ ಗೇಟ್ ನಂಬರ್ 19 ಚೈನ ಲಿಂಕ್ ಕಳಚಿ ಹಾನಿಗೊಳಗಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಹೌದು ತಾಲೂಕಿನ ಮುನಿರಾಬಾದ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟಿನ ಗೇಟ್ ನಂಬರ್ 19 ರ ಗೇಟ್ ಚೈನ್ ಲಿಂಕ್ ತಂಡಾಗಿದ್ದು ನೀರಿನ ರಭಸಕ್ಕೆ ಗೇಟ್ ಕಣ್ಮರೆಯಾದ ಘಟನೆ ಶನಿವಾರ 10.08.2024ರ ರಾತ್ರಿ 11:10 ಗಂಟೆಯ ಸುಮಾರಿಗೆ ಸಂಭವಿಸಿರುತ್ತದೆ. ಈ ಘಟನೆಯಿಂದ ನದಿ ಪಾತ್ರಕ್ಕೆ 35,000 ಕ್ಯೂಸೆಕ್ಸ್ ನೀರು ಗೇಟ್ ನಂಬರ್ 19 ಮುಖಾಂತರ ಹರಿದು ಹೋಗುತ್ತಿದ್ದು. ಒಟ್ಟಾರೆ ಎಲ್ಲಾ ಗೇಟ್ ಗಳ ಮೂಲಕ 48000 ಕ್ಯೂಸೆಕ್ಸ್ ನೀರು ನದಿಯ ಮೂಲಕ ಹೊರಹರಿವು ಹೋಗುತ್ತಿದೆ.

ಗೇಟ್ ನಂಬರ್ 19ರ ಅವಘಡ ದಿಂದ ಅಡೆತಡೆ ಇಲ್ಲದೆ ನದಿಗೆ ನೀರು ಹರಿಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ ಹಾಗೂ ತುಂಗಭದ್ರಾ ಆಡಳಿತ ಮಂಡಳಿ ಸಾರ್ವಜನಿಕರು ನದಿ ಪಾತ್ರದಿಂದ ದೂರವಿರಬೇಕು ಎಂದು ಜನತೆಗೆ ಎಚ್ಚರಿಕೆಯನ್ನು ನೀಡಿರುತ್ತದೆ.

ವಿಷಯ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯಲ್ಲಿಯೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಆಣೆಕಟ್ಟೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

error: Content is protected !!