BIG UPDATE : ತುಂಗಭದ್ರಾ ಅಣೆಕಟ್ಟು ಅವಘಡ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ!

You are currently viewing BIG UPDATE : ತುಂಗಭದ್ರಾ ಅಣೆಕಟ್ಟು ಅವಘಡ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ!

ವಿಜಯನಗರ : ಕಲ್ಯಾಣ ಕರ್ನಾಟಕದ ಜೀವ ನಾಡಿಯಾದ ತುಂಗಭದ್ರ ಆಣೆಕಟ್ಟು ಕ್ರಸ್ಟ್ ಗೇಟ್ ಕಟ್ ಆಗಿರುವಂತ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳದಲ್ಲಿದ್ದಂತ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಆಗಸ್ಟ್.13ರಂದು ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸುವಂತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದರಿಂದ ಈವರೆಗೆ 8 ಟಿಎಂಸಿ ನೀರು ಪೋಲಾಗಿದೆ. ಇದೇ ಡ್ಯಾಂ ನೀರು ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಜೀವನಧಾರೆಯಾಗಿದೆ ಎಂದರು.

‘ನಿನ್ನೆ ರಾತ್ರಿಯಿಂದ 10 ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರಗಡೆ ಬಿಡಲಾಗುತ್ತಿದೆ. 19ನೇ ಗೇಟ್ ಚೈನ್ ತುಂಡಾಗಿ ಮುರಿದಿದೆ. ಇದರ ಮೇಲೆ ಹೆಚ್ಚು ಒತ್ತಡ ಬೀಳಬಾರದು ಎನ್ನುವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಸುರಕ್ಷತೆಯ ದೃಷ್ಟಿಯಿಂದ ನದಿಗೆ 98 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಪ್ರಸ್ತುತ 28,056 ಕ್ಯೂಸೆಕ್ಸ್ ಒಳಹರಿವಿದೆ. ಮುರಿದು ಬಿದ್ದಿರುವ ಗೇಡ್ ದುರಸ್ತಿ ಮಾಡಲು ನೀರಿನ ಪ್ರಮಾಣ ಇಳಿಕೆ ಮಾಡಲಾಗುತ್ತಿದೆ. 19ನೇ ಗೇಟ್ ಮೇಲೆ ಒತ್ತಡ ಕಡಿಮೆ ಮಾಡಲು ನೀರು ಹರಿಸಲಾಗಿದೆ. ಉಳಿದ ಗೇಟ್ ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ.

Leave a Reply

error: Content is protected !!