LOCAL-EXPRESS : ಹುಣಸೆಮರ ನಾಶ, ಹಲವರ ಮೇಲೆ ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ತೊಗುಕತ್ತಿ.!!

You are currently viewing LOCAL-EXPRESS : ಹುಣಸೆಮರ ನಾಶ, ಹಲವರ ಮೇಲೆ ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ತೊಗುಕತ್ತಿ.!!

ಹುಣಸೆಮರ ನಾಶ, ಹಲವರ ಮೇಲೆ ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ತೊಗುಕತ್ತಿ.!!!!

PV ನ್ಯೂಸ್ ಡೆಸ್ಕ್ ಕೂಕನೂರು : ಸ್ಥಳೀಯ ಅಧಿಕಾರಿಗಳ ಅನುಮತಿ ಇಲ್ಲದೇ ಪಲವತ್ತಾದ ಹಣ್ಣು ಕೊಡುವ ಹುಣಸೆಮರ ಕಡಿದ ಆರೋಪ ಹಲವರ ಮೇಲೆ ಬಂದಿದ್ದು ಅರಣ್ಯ ಸಂರಕ್ಷಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಹಿನ್ನೆಲೆ ಹಲವರ ಮೇಲೆ ಕಾಯ್ದೆ ಉಲ್ಲಂಘನೆಯ ತೂಗುಕತ್ತಿ ನೇತಾಡುತ್ತಿದೆ.

ಕುಕನೂರು ಪಟ್ಟಣದ 19 ನೇ ವಾರ್ಡ್ ನ ಗುದ್ನೇಶ್ವರ ಮಠದ ಹತ್ತಿರದ ಕೆ ಎಲ್ ಈ ಎಂಬ ಖಾಸಗಿ ಶಿಕ್ಷಣ ಸಂಸ್ಥೆಯು ಗುತ್ತಿಗೆ ಪಡೆದುಕೊಂಡ ಜಾಗದಲ್ಲಿ ಪಟ್ಟಣ ಪಂಚಾಯತ್ ನಿಂದ ಯಾವುದೇ ಪೂರ್ವನುಮತಿ ಇಲ್ಲದೇ 2 ಹುಣಸೆ ಮರಕ್ಕೆ ಕಡಿಯಲಾಗಿದ್ದು ಕೆ ಎಲ್ ಈ ಕಾಲೇಜಿನ ಪ್ರಿನ್ಸಿಪಾಲ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷಕ್ಕೆ ಇಲಾಖೆಯ ನಿರೀಕ್ಷಕರ ಮೇಲೆ ಸ್ಥಳೀಯ ನಿವಾಸಿಗಳು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು ಘಟನೆ ಸಂಬಂಧ ಅರಣ್ಯ ರಕ್ಷಣೆ ಕಾಯ್ದೆಯ ಉಲ್ಲಂಘನೆ ಅಡಿಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ.

ನೂರಾರು ವರ್ಷದ ಇತಿಹಾಸ ಇರುವ ಸ್ಥಳೀಯ ಗುದ್ನೇಶ್ವರ ಮಠಕ್ಕೆ ಸೇರಿದ ಹುಣಸೆ ಮರಗಳ ಮಾರಣಹೋಮ ಮಾಡಿದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದು ಕಂದಾಯ ನಿರೀಕ್ಷಕ ಮತ್ತು ಪ್ರಿನ್ಸಿಪಾಲ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಗಾಗಲಿ, ಗ್ರಾಮಸ್ಥರ ಗಮನಕ್ಕೆ ತರದೇ ಏಕಾಏಕೀ ಕ್ರೀಡಾಕೂಟ ಏರ್ಪಡಿಸುವ ಸಲುವಾಗಿ ಸ್ವಚ್ಛತೆ ಮಾಡುವ ನೆಪದಲ್ಲಿ ಎರಡು ಪಲವತ್ತಾದ ದೊಡ್ಡ ಗಾತ್ರದ ಹುಣಸೆ ಮರಗಳನ್ನು ನಾಶ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ಕೆರಳಿದ್ದು ಅರಣ್ಯ ರಕ್ಷಣೆಯ ಕಾಯ್ದೆಯ ಉಲ್ಲಂಘನೆಯ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಕೆ ಎಲ್ ಈ ಸಂಸ್ಥೆಯ ಆಡಳಿತ ಮಂಡಳಿಯ ಪ್ರಭಾವಿ ಸದಸ್ಯರ ಮೌಕಿಕ ಆದೇಶದ ಮೇರೆಗೆ, ಅವರ ಪ್ರಭಾವದಿಂದ ಕುಕನೂರು ಪಟ್ಟಣ ಪಂಚಾಯತ್ ಗೆ ಸೇರಿದ ಜೆ ಸಿ ಬಿ ವಾಹನ ಬಳಸಿಕೊಂಡು ಸ್ವಚ್ಛತ್ತೆ ಮಾಡುವಾಗ ಎರಡು ಹುಣಸೆ ಮರಗಳು ಧರೆಗುರುಳಿವೆ. ಕೂಡಲೇ ತಹಸೀಲ್ದಾರ್ ಅವರು ಸ್ಥಳಕ್ಕೆ ಬರುವಂತೆ ಅಗ್ರಹಿಸಿ ಸ್ವಲ್ಪ ಕಾಲ ಕಂದಾಯ ನಿರೀಕ್ಷಕರೊಂದಿಗೆ ಮಾತಿನ ಚಕಮಕಿ ನಡೆಯಿತು,

ಮರ ಕಡಿದವರು, ಇದಕ್ಕೆ ಕಾರಣರಾದವರು ಯಾರೇ ಆಗಿರಲಿ ಕಠಿಣ ಕಾನೂನು ಕ್ರಮ ಕೈಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

– ಪ್ರಜಾವೀಕ್ಷಣೆ ಸುದ್ದಿಜಾಲ, ಕುಕನೂರು

Leave a Reply

error: Content is protected !!