ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ಮನವಿ
ಹೊಸಪೇಟೆ (ವಿಜಯನಗರ) : ಹೊಸಪೇಟೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದ ಸಮಾರು 35 ರಿಂದ 40 ವರ್ಷದ ಅನಾಮಧೇಯ ವ್ಯಕ್ತಿಯನ್ನು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ (ಯು.ಡಿ.ಆರ್ ನಂ:17/2024 ಕಲಂ ಬಿ.ಎನ್.ಎಸ್.ಎಸ್-2023 ಅಡಿ) ಪ್ರಕರಣ ದಾಖಲಾಗಿದೆ.
ಘಟನೇ ಏನು: ಅನಾಮದೇಯ ಈ ವ್ಯಕ್ತಿಯು ಹೊಸಪೇಟೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಗಸ್ಟ್ 9ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ 108ಗೆ ಕರೆ ಮಾಡಿ 100 ಬೆಡ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 10ರಂದು ಮೃತಪಟ್ಟಿರುತ್ತಾರೆ. ಮೃತನ ಮುಂದಿನ ಅಂತ್ಯ ಸಂಸ್ಕಾರಕ್ಕಾಗಿ ಅವರ ರಕ್ತ ಸಂಬಂಧಕರಾಗಲಿ, ಬಂಧುಬಳಗದವರಾಗಲಿ ಯಾರೂ ಪತ್ತೆಯಾಗಿರುವುದಿಲ್ಲ.
ಮೃತನ ಚಹರೆ ಗುರುತು: ವಯಸ್ಸು 35 ರಿಂದ 40 ವರ್ಷ, 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 2ರಿಂದ 3 ಇಂಚು ಉದ್ದದ ಕಪ್ಪು ಕೂದಲು, ಚಿಗುರು ಗಡ್ಡ ಹಾಗೂ ಮೀಸೆ ಬಿಟ್ಟಿರುತ್ತಾನೆ. ಮೆರುನ್, ಬಿಳಿ ಹಾಗೂ ಲೈಟ್ ಪಿಂಕ್ ಮಿಶ್ರಿತ ಆಫ್ ತೋಳಿನ ಟಿಶರ್ಟ್, ಕಪ್ಪು ಬಣ್ಣದ ಜೀನ್ಸ್ ಫ್ಯಾಂಟ್, ಲೈಟ್ ಯೆಲ್ಲೊ ಕಲರ್ ಒಳ ಉಡುಪು ಧರಿಸಿರುತ್ತಾನೆ. ಬಲಗೈಯಲ್ಲಿ ಶಿರಿ, ಗೌತಮ್, ಹಾಗು ಅಮ್ಮ ಎಂದು ಹಾಕಿಸಿದ ಅಚ್ಚೆ ಇರುತ್ತದೆ.
ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿ.ಐ ದೂ.ಸಂ: 08394-224033/ 9480805745, ಹೊಸಪೇಟೆ ಡಿ.ಎಸ್.ಪಿ. ದೂ,ಸಂ: 08394-224204/9480805720, ವಿಜಯನಗರ ಎಸ್.ಪಿ. ದೂ.ಸಂ 9480805700 ಗೆ ಸಂಪರ್ಕಿಸಬಹುದು ಎಂದು ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.