LOCAL NEWS : ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಸೂಕ್ತ ಭದ್ರತೆಗಾಗಿ ಮನವಿ!

You are currently viewing LOCAL NEWS : ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಸೂಕ್ತ ಭದ್ರತೆಗಾಗಿ ಮನವಿ!

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಸೂಕ್ತ ಭದ್ರತೆಗಾಗಿ ಮನವಿ!

ಶಿರಹಟ್ಟಿ :  ಕಳೆದ 9 ಆಗಸ್ಟ್ ರಂದು ಕಲ್ಕತ್ತಾದ ಆರ್ ಜಿ ಕಾರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಬರ್ಬರ ಹತ್ಯೆ ಘಟನೆ ವೈದ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ ಕಾರಣಕ್ಕೆ ಶಿರಹಟ್ಟಿ ತಾಲೂಕ ವೈದ್ಯರ ಸಂಘಟನೆಯ ಹಾಗೂ ಔಷದ ವ್ಯಾಪಾರಸ್ಥರು ಸೇರಿಕೊಂಡು ತಾಲೂಕ ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವೈದ್ಯಕೀಯ ಕಾಲೇಜ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಗೆ ರಕ್ಷಣೆ ಇಲ್ಲ. ಸಹೋದ್ಯೋಗಿ ವೈದ್ಯ ಮಹಿಳೆಯರಿಗೆ ಅನ್ಯಾಯವನ್ನು ಖಂಡಿಸಿ ದೇಶಾದ್ಯಂತ ಎಲ್ಲ ವೈದ್ಯರು ಹಾಗೂ ಔಷಧಿ ಅಂಗಡಿ ವ್ಯಾಪಾರಸ್ಥರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕ ವೈದ್ಯ ಸಂಘಟನೆಯ ಸದಸ್ಯರು ಹಾಗೂ ಔಷಧಿ ಅಂಗಡಿಯ ಸಂಘಟನೆಯ ವ್ಯಾಪಾರಸ್ಥರ ಸದಸ್ಯರು ಭಾಗಿಯಾಗಿದ್ದರು.

ವರದಿ: ವೀರೇಶ್ ಗುಗ್ಗರಿ, ಗದಗ

Leave a Reply

error: Content is protected !!