ಲಕ್ಷ್ಮೇಶ್ವರ : ಚಾಲಕರ ರಾಂಗ್ ಸೈಡ್ ಡ್ರೈವಿಂಗ್ ಪರಿಣಾಮ ಸಾರಿಗೆ ಬಸ್ಸುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ಬೆಳಗಿನ ಜಾವ ಲಕ್ಷ್ಮೇಶ್ವರ ಸಮೀಪದ ಯಲುಗಿ ಗ್ರಾಮದ ಬಳಿ ಇರುವ ರೈಲ್ವೆ ಅಂಡರ್ ಬ್ರಿಜಿನಲ್ಲಿ ಸಂಭವಿಸಿದೆ ರೋಣ ಬೆಂಗಳೂರು ಹಾಗೂ ಗದಗ್ ಬೆಂಗಳೂರು ನಡುವೆ ಡಿಕ್ಕಿ ಸಂಭವಿಸಿ ಎರಡು ಬಸ್ಸುಗಳಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ
ಸಣ್ಣ ಪುಟ್ಟ ಗಾಯಗಳಾಗಿವೆ ಬ್ರಿಡ್ಜ್ ಹತ್ತಿರ ರಸ್ತೆ ಸಣ್ಣದಾಗಿರುವುದರಿಂದ ಹಾಗೂ ರಸ್ತೆಯಲ್ಲಿನ ಗುಂಡಿ ಇರುವುದೇ ರಸ್ತೆ ಅಪಘಾಟಕ್ಕೆ ಕಾರಣ ಎನ್ನಲಾಗಿದೆ ರಸ್ತೆ ಮಧ್ಯ ಇರುವ ಸಣ್ಣ ಸಿಡಿಯನ್ನು ತೆರವುಗೊಳಿಸಿ ಸುರಕ್ಷಾ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥಗೌಡ ಕೆಂಚೇಗೌಡ ಆಗ್ರಹಿಸಿದ್ದಾರೆ. ಘಟನಾಸ್ಥಳಕ್ಕೆ ಪೊಲೀಸ್ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.