PV ನ್ಯೂಸ್ ಡೆಸ್ಕ್-ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಹಾಕೊಂಡಿರುವ ಪರಪ್ಪನ ಅಗ್ರಹಾರ ಜೈಲುವಾಸದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು “ಡಿಂಪಲ್ ಕ್ವೀನ್” ನಟಿ ರಚಿತಾರಾಮ್ ಅವರು ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರು ಕಳೆದ ಎರಡು ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರ ಹಾಗೂ ಸಹೋದರ ಸೇರಿದಂತೆ ಚಿತ್ರರಂಗದ ಹಲವು ನಟ ನಟಿಯರು ಇವರನ್ನು ಇತ್ತೀಚಿಗೆ ಭೇಟಿ ಮಾಡಿದ್ದರು.
ಇಂದು “ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್” ನಟಿ ರಚಿತಾ ರಾಮ್ ಅವರು ಕೂಡ ನಟ ದರ್ಶನ್ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಆಪ್ತಟ ಸಚ್ಚಿದಾನಂದ ಜೊತೆಗೆ ನಟಿ ರಚಿತಾ ರಾಮ್ ಆಗಮಿಸಿದ್ದಾರೆ. ಅಲ್ಲದೇ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ಸಹ ಈ ವೇಳೆ ದರ್ಶನ ಅವರನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದಾರೆ ಎನ್ನಲಾಗಿಗದೆ.