ವಿವಿಧ ಯೋಜನೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಹೊಸಪೇಟೆ (ವಿಜಯನಗರ) : 2024-25ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಡಿ ವಿವಿಧ ಯೋಜನೆಗಳಡಿ ಅರ್ಹ ಮಹಿಳಾ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗಿನಿ ಯೋಜನೆ :-ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ. ವಯೋಮಿತಿ 18 ರಿಂದ 55 ವರ್ಷಗಳು ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಆದಾಯದ ಮಿತಿ 2 ಲಕ್ಷ ರೂಗಳು ಇರುತ್ತವೆ. ಘಟಕವೆಚ್ವ ಕನಿಷ್ಠ 1 ಲಕ್ಷದಿಂದ ಗರಿಷ್ಠ 3 ಲಕ್ಷ ರೂಗಳು ಇದರಲ್ಲಿ 50 ರಷ್ಟು ಬಡ್ಡಿದರದಲ್ಲಿ 1 .50 ಲಕ್ಷ ರೂಗಳಿಗೆ ಸಹಾಯಧನ ನೆರವು ನೀಡಲಾಗುವುದು. ಇತರೆ ವರ್ಗದ ಫಲಾನುಭವಿಗಳಿಗೆ ಆದಾಯದ ಮಿತಿ ೧.೫೦ ಲಕ್ಷ ರೂಗಳು ಇರುತ್ತವೆ. ಘಟಕವೆಚ್ಚ ಕನಿಷ್ಠ 1 ಲಕ್ಷದಿಂದ ಗರಿಷ್ಠ 3 ಲಕ್ಷ ರೂಗಳು ಇದರಲ್ಲಿ 30 ರಷ್ಟು ಬಡ್ಡಿದರದಲ್ಲಿ 90,000 ಸಹಾಯಧನ ನೆರವು ನೀಡಲಾಗುವುದು.
ಚೇತನ ಯೋಜನೆ:- ದಮನಿತ ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ವಯೋಮಿತಿ 18 ವರ್ಷ ಮೇಲ್ಪಟ್ಟು ಇರಬೇಕು.
ಧನಶ್ರೀ ಯೋಜನೆ:- ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 30,000 ರೂಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ವಯೋಮಿತಿ 18 ದಿಂದ 60 ವರ್ಷಗಳು ಇರಬೇಕು.
ಲಿಂಗತ್ವ ಅಲ್ಪಸಂಖ್ಯಾತ ಪುರ್ನವಸತಿ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:- 1993-94 ಮತ್ತು 2007-08ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ವಿಶೇಷ ಸೂಚನೆಗಳು:- ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು, ಉದ್ಯೋಗಿನಿ ಯೋಜನೆಯ ಎಸ್.ಸಿ/ಟಿಎಸ್.ಪಿ ಬಳಕೆಯಾಗದ (ಅನ್‌ಸ್ಟೆಂಟ್) ಅನುದಾನದಡಿ ಸೌಲಭ್ಯ ಪಡೆಯಲು ಇಚ್ಚಿಸುವ ಫಲಾಪೇಕ್ಷೆಗಳು, ಅರ್ಜಿದಾರರು ಬಾಪೂಜಿ ಸೇವಾಕೇಂದ್ರ, ಗ್ರಾಮಒನ್ ಸೇವಾಕೇಂದ್ರ, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಸೇವಾಸಿಂಧೂ ಪೋರ್ಟಲ್ನ https://sevasindhu.karnataka.gov.inಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 21 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸದರಿ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು, 2023-24 ನೇ ಸಾಲಿನಲ್ಲಿ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಮತ್ತೊಮ್ಮೆ ಅರ್ಜಿಸಲ್ಲಿಸುವ ಅಗತ್ಯವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬಸವೇಶ್ವರ ಬಡಾವಣೆ, ಮಾತಾ ಆಸ್ಪತ್ರೆ ಹತ್ತಿರ ಮೆಟ್ರೋ ಪ್ಯಾಷನ್ ಅಂಗಡಿ, 1 ನೇ ಮಹಡಿ ಸಪ್ತಗಿರಿ ಶಾಲೆ ಹತ್ತಿರ, ಹೊಸಪೇಟೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.