ಬೈಕ್ ಸವಾರರ ಪ್ರಾಣ ಬಲಿಗಾಗಿ ಕಾದು ಕುಳಿತ ಅವೈಜ್ಞಾನಿಕ ,ಅಪೂರ್ಣ ಕಾಮಗಾರಿ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಮಾರ್ಗವಾಗಿ ಬಸಾಪುರ, ಹಾರೋಗೇರಿ, ಮುರುಡಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಹಳ್ಳದ ಸಿಡಿ ದುರಸ್ತಿ ಹೆಸರಿನಲ್ಲಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದು ಒಂದು ವರ್ಷ ಗತಿಸಿದೆ.
ಆದರೆ ಈ ವರೆಗೂಕಾಮಗಾರಿ ಪೂರ್ಣಗೊಂಡಿಲ್ಲ. ಈ ಮೊದಲು ಇಲ್ಲಿನ ರಸ್ತೆ ಒಳ್ಳೆಯ ಗುಣಮಟ್ಟದಲ್ಲಿತ್ತು.ಆದರೆ ಕಾಮಗಾರಿ ಮಾಡಲೆಂದು ಮಣ್ಣು ಹಾಕಿ ಸರಿಯಾಗಿದ್ದ ಕಾಂಕ್ರೀಟ್ ಕಿತ್ತು ಕಾಮಗಾರಿ ಹಾಗೆಯೇ ಬಿಟ್ಟಿದ್ದರಿಂದ, ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ.ಅದರಲ್ಲೂ ಸ್ವಲ್ಪ ಮಳೆಯಾದರೆ ಸಾಕು ಉಕ್ಕಿ ಹರಿಯುವ ಹಳ್ಳ ನೀರು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ವಾಹನ ಸವಾರರು ಪ್ರತಿನಿತ್ಯ ಪರದಾಟ ಅನುಭವಿಸುವಂತಾಗಿದೆ. ಸರಿಯಾಗಿದ್ದ ರಸ್ತೆಯನ್ನ ಹದಗೆಡಿಸಿ, ಇಷ್ಟೆಲ್ಲ, ಅನಾನುಕೂಲವಾದರೂ, ಸಂಬಂಧಪಟ್ಟ ಲೋಕೋಪಯೋಗಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವತ್ತ ಚಿತ್ತ ಹರಿಸಬೇಕಿದೆ.
ವರದಿ: ವೀರೇಶ್ ಗುಗ್ಗರಿ