LOCAL NEWS : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ

You are currently viewing LOCAL NEWS : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ

ಕುಕನೂರು : ಪಟ್ಟಣದ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾನಗರದ ಸರ್ಕಾರಿ ಶಾಲೆ ಮತ್ತು ಪದವೀಪೂರ್ವ ಕಾಲೇಜಿನಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಣ್ಣರಿಗಾಗಿ ಮಕ್ಕಳ ವಿವಿಧ ಬಗೆಯ ವೇಷ ಭೂಷಣ ಹಾಡು ಸೇರಿದ ಚಿಣ್ಣರ ಪ್ರತಿಭೋತ್ಸವ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ್ಯೊಪಾಧ್ಯಾಯ ಧರ್ಮಪ್ಪ ನಾಯಕ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಕೆ, ಬಳಕೆ ಮತ್ತು ಬೆಳವಣಿಗೆಗೆ ಸ್ಥಳೀಯ ಕನ್ನಡ ಅಭಿವೃದ್ಧಿ ಟ್ರಸ್ಟ್ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ತಾಲೂಕು ಜಿಲ್ಲಾಮಟ್ಟದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಯ ಸೇವೆ ಮಾಡುತ್ತಿದೆ ಎಂದು ಹೇಳಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್ ದಾಸ್ ಅವರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕುರಿತ ಆಚರಣೆ, ಉದ್ದೇಶದ ಬಗ್ಗೆ ವಿಶೇಷ ಮಾತುಗಳನ್ನು ಹೇಳಿದರು.

ಸ್ಥಳೀಯ ಠಾಣೆಯ ಪಿಎಸ್ಐ ಗುರುರಾಜ್ ಟಿ ಅವರು ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿದ ಮುದ್ದು ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ರಾಧಾ ದೊಡ್ಡಮನಿ, ಪ್ರಶಾಂತ್ ಆರುಬೆರಳಿನ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮಮತಾಜ್ ಬೇಗಂ, ಪತ್ರಕರ್ತ ಈರಯ್ಯ ಕುರ್ತಕೋಟಿ, ಚನ್ನಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು. ಆಕಾಶವಾಣಿ ಗಾಯಕ ಮೇಘರಾಜ್ ಜಿಡಗಿ ಅವರಿಂದ ಕೃಷ್ಣನ ಗೀತೆಗಳು ಪ್ರಸ್ತುತ ಪಡಿಸಲಾಯಿತು.

ಇನ್ನೊಂದಡೆ ವಿಶ್ವ ಜಾನಪದ ದಿನಾಚರಣೆಯ ನಿಮಿತ್ತ ಸರ್ಕಾರಿ ಪದವೀಪೂರ್ವ ಕಾಲೇಜಿನಲ್ಲಿ ನಡೆದ ಜಾನಪದ ಯುವ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಈಶಪ್ಪ ಮಳಗಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಾನಪದ ಹಾಡು, ಸೇರಿದಂತೆ ಶರಣಪ್ಪ ಉಮಚಗಿ ಅವರಿಂದ ಜಾನಪದ ಸಂಭ್ರಮದ ಕುರಿತು ಉಪನ್ಯಾಸ ನಡೆಯಿತು.

ಕಾರ್ಯಕ್ರಮದಲ್ಲಿ ಮಂಜುನಾಥ್ ಕುದರಿಮನಿ, ರಾಮು ಕೌದಿ, ಈರಯ್ಯ ಕುರ್ತಕೋಟಿ, ಮೇಘರಾಜ್ ಜಿಡಗಿ ಉಪಸ್ಥಿತರಿದ್ದರು. ಸಿದ್ದಪ್ಪ ಬಗರಿಕರ ಅವರಿಂದ ಮೃದಂಗ ವದನ ನುಡಿಸಲಾಯಿತು. ಉಪನ್ಯಾಸಕ ಮಂಜುನಾಥ್ ಅಂಗಡಿ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

Leave a Reply

error: Content is protected !!