LOCAL NEWS : ನವೋದಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ..!

You are currently viewing LOCAL NEWS : ನವೋದಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ..!

ನವೋದಯದ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ..!

ಕುಕನೂರು : ಜವಾಹರ್‌ನವೋದಯ ವಿದ್ಯಾಲಯದಲ್ಲಿ ಕೆಲವು ದಿನಗಳ ಹಿಂದೆ 11ನೇ ತರಗತಿ ವಿದ್ಯಾರ್ಥಿಗಳು 8-9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಸಾಮೂಹಿಕ ಹಲ್ಲೆ ಮಾಡಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ನವೋದಾಯ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆಮಾಡಿರುವ ಕುರಿತು ಕ್ರಮವಹಿಸುವಂತೆ ಸಂಸದರಿಗೆ ಕೆಲ ಪಾಲಕರಿಂದ ಮನವಿ ಸಲ್ಲಿಸಲಾಗಿತ್ತು.

ಈ ಘಟನೆ ಕುರಿತು ಸೋಮವಾರ (ಆ.26) ಸಂಜೆ 7 ಗಂಟೆ ಸುಮಾರಿಗೆ ಸಂಸದ ರಾಜಶೇಖರ್ ಹಿಟ್ನಾಳ್ ಅವರು ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಈ ವೇಳೆ ಮಾತನಾಡಿದ ಅವರು, ” ಈ ಘಟನೆಯಿಂದ ಪಾಲಕರಿಗೆ ಬೇಸರ ಹಾಗೂ ಭಯದ ವಾತಾವರಣ ಊಂಟಾಗಿದೆ, ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೂ ಇದಕ್ಕೆ ಕಾರಣ, ಪ್ರತಿಷ್ಠಿತ ವಿದ್ಯಾಲಯವು ಇಂತಹ ಘಟನೆಗಳಿಂದ ಹೆಸರು ಕೆಡಿಸಿಕೊಳ್ಳಬಾರದು, ವಿದ್ಯಾಲಯದ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಡಳಿತ ಮಂಡಳಿಯವರಿಗೆ ತರಾಟೆಗೆ ತೆಗೆದುಕೊಂಡರು.

    ಇದೇ ವೇಳೆ ಮಾತನಾಡಿದ ನವೋದಯ ವಿದ್ಯಾಲಯದ ಫ್ರಾನ್ಸಿಪಾಲರು, ‘ ಈ ಕೃತ್ಯ ಎಸೆಗಿದಂತ ಏಳು ಜನ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನು ಮೇಲೆ ಇಂತಹ ಯಾವುದೇ ಘಟನೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಏನಿದು ಘಟನೆ..?

ತಾಲೂಕಿನ ಕುಕನೂರು ಪಟ್ಟಣದ ಸಮೀಪ ಗುದ್ನೇಪ್ಪನ ಮಠದಲ್ಲಿರುವ ಜವಾಹರ್‌ನವೋದಯ ವಿದ್ಯಾಲಯದಲ್ಲಿ ಕೆಲವು ದಿನಗಳ ಹಿಂದೆ ಆವರಣದಲ್ಲಿ ಹಾಡುಹಗಲೇ ಹಿರಿಯ ವಿದ್ಯಾರ್ಥಿಗಳು ಅಂದರೆ 11ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳು 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಕಟ್ಟಿಗೆ, ಬೆಲ್ಟ್ ಹಾಗೂ ಪೈಪ್ ಗಳ ಮೂಲಕ ಹೊಡೆದಿದ್ದಾರೆ. ಕೆಲ ವಿದ್ಯಾರ್ಥಿಗಳ ಗುಪ್ತಾಂಗಗಳಿಗೆ ಹೊಡೆದು ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಗಗನ್ ನೋಟಗಾರ್, ಶಿವಾನಂದ ಪ್ಯಾಟಿ, ಬಸವರಾಜ ನಿ ಜಗನ್ನಾಥ ಬಿಸರಳ್ಳಿ, ಹನುಮಂತಪ್ಪ ಯಲ್ಲಪ್ಪ ರಕ್ಕಸಗಿ, ಟಿ.ಎನ್. ಚಂದ್ರ ಗಂಗಾಧರ ಡೊಳ್ಳಿನ ರಂಗನಾಥ ದ ನಾಗರಾಜ ವಡ್ರಕಲ್ ಇತರರಿದ್ದರು.

Leave a Reply

error: Content is protected !!