ನವೋದಯ ಶಾಲೆಯಲ್ಲಿ ಗಲಾಟೆ 7 ವಿದ್ಯಾರ್ಥಿಗಳು ಸಸ್ಪೆಂಡ್! : ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ, ಸಿಬ್ಬಂದಿಗಳಿಗೆ ಕ್ಲಾಸ್.!!
ಕಟ್ಟಡಗಳ ನಿರ್ಮಾಣ, ಶಾಲೆಯ ನವೀಕರಣಕ್ಕಾಗಿ 110 ಕೋಟಿ ರೂ ಅನುದಾನ ಕೇಳಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ!
ಕುಕನೂರು : ಇಲ್ಲಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಭೇಟಿ ನೀಡಿ ಕೆಲವು ಘಟನೆ ಕುರಿತು ವಿವರಗಳನ್ನು ಪಡೆದುಕೊಂಡರು.
ಸಂಸದ ಹಿಟ್ನಾಳ್ ಅವರು ಸೋಮವಾರ ನವೋದಯ ವಿದ್ಯಾಲಯಕ್ಕೆ ಭೇಟಿ ಕೊಟ್ಟು ಪ್ರಾಚಾರ್ಯರು, ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಈ ರೀತಿಯ ಘಟನೆ ನಡೆಯಬಾರದಂತೆ ನೋಡಿಕೊಳ್ಳಿ ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ನಮ್ಮ ಜಿಲ್ಲೆಯಲ್ಲಿಯ ಅತ್ಯಂತ ಪ್ರತಿಷ್ಠಿತ ವಸತಿ ಶಾಲೆ ಇದಾಗಿದ್ದು ಶಾಲೆಗೆ ಕಳಂಕ ತರುವ ಕೆಲಸ ಮಾಡಬೇಡಿ, ಪೋಷಕರು ಹೇಳಿದಂತೆ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಇದ್ದಾರೆ ಎನಿಸುತ್ತಿದೆ. ಅವರಿಗೆ ಧೈರ್ಯ, ವಿಶ್ವಾಸ ತುಂಬುವ ಕೆಲಸ ಮಾಡಿ, ತಿಂಗಳಿಲ್ಲಿ ಒಮ್ಮೆ ವಿದ್ಯಾರ್ಥಿಗಳ ಕೌಂನ್ಸೆಲಿಂಗ ನಡೆಸಲು ಕ್ರಮ ಕೈಕೊಳ್ಳುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತವೆ, ಎಲ್ಲ ವಿದ್ಯಾರ್ಥಿಗಳ, ಹಿತ, ಭವಿಷ್ಯ ಮುಖ್ಯ, ಶಾಲೆಯಲ್ಲಿ ಮುಕ್ತ ವಾತಾವರಣ ನಿರ್ಮಿಸಿ ಎಂದು ಆಡಳಿತ ಮಂಡಳಿ, ಸಿಬ್ಬಂದಿಗಳಿಗೆ ಸಂಸದರಾದ ರಾಜಶೇಖರ್ ಹಿಟ್ನಾಳ್ ಅವರು ಸಲಹೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಟ್ಟಡಗಳ ನಿರ್ಮಾಣ, ಶಾಲೆಯ ನವೀಕರಣ ಕ್ಕಾಗಿ 110 ಕೋಟಿ ರೂ ಅನುದಾನ ಕೇಳಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ’ ಎಂದರು.
‘ಮುಂದಿನ ವಾರ ಕೇಂದ್ರ ಹಣಕಾಸು ಮಂತ್ರಿ, ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರದಲ್ಲಿ ಮಂಜೂರು ಮಾಡಿಕೊಡುವಂತೆ ಮನವರಿಕೆ ಮಾಡುವೆ’ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಅವರು ಹೇಳಿದರು.