ಕುಕನೂರು : ಆಟದ ಅಂಗಳದಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ, ಆದರೆ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ದೈಹಿಕ ಶಿಕ್ಷಕ ಶರಣಪ್ಪ ವಿರಾಪುರ ಹೇಳಿದರು.
ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ತಳಕಲ್ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಹದ ಬೆಳವಣಿಗೆ ಜೊತೆಗೆ ಸದೃಢ ದೇಶ ನಿರ್ಮಾಣಕ್ಕೆ ಸದೃಢ ಯುವಪಡೆ ನಿರ್ಮಾಣದ ಅವಶ್ಯಕತೆ ಇದೆ. ಕ್ರೀಡೆಗಳು ಸದೃಢ ಯುವಕರ ನಿರ್ಮಾಣಕ್ಕೆ ವೇದಿಕೆಯಾಗಿವೆ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಯಲ್ಲಿ ಬಾಗವಹಿಸಬೇಕು ಎಂದು ಶರಣಪ್ಪ ವಿರಾಪುರ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಮತ್ತು ಬುಧವಾರ ಎರಡೂ ದಿನ ನಡೆಯುವ ಕ್ರೀಡಾಕೂಟದಲ್ಲಿ ತಳಕಲ್ ವಲಯದ 11 ಶಾಲೆಯ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಜಾತಾ ಡಂಬಳ್, ಗ್ರಾಮ ಪಂಚಾಯತ್ ಅಧ್ಯಕ್ಷ ವೀರಣ್ಣ ಗೊಂದಿ, ಕೆಡಿಪಿ ಸದಸ್ಯ ಶರಣಪ್ಪ ವೀರಪ್ಪಗೌಡ್ರ, ಗೌರಮ್ಮ ನಾಗನೂರು, ಶಿಕ್ಷಕರಾದ ಬಸವರಾಜ್ ಮೇಟಿ, ಉದಯ್ ಕುಮಾರ್ ತಳವಾರ್, ಶೇಖರಪ್ಪ ಚಿಂಚಲಿ, ಶಿವಕುಮಾರ್ ಮೇಟಿ, ಹನುಮಂತಪ್ಪ ನಾಮದರ್, ಉಮೇಶ್ ಕಂಬಳಿ, ಕಲ್ಮೇಶ ಗಾಳಿ, ಶಿವಾನಂದ್ ಹೊಸಮನಿ, ಶ್ರೀಕಾಂತ್ ಮುರುಗೋಡ್, ಹನುಮೇಶ್ ಎಂ ಬಿ ಇತರರು ಉಪಸ್ಥಿತರಿದ್ದರು.