LOCAL NEWS : ಹಮ್ಮಿಗಿ ಡ್ಯಾಮ್ ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಡಾ ಚಂದ್ರು ಲಮಾಣಿ.

You are currently viewing LOCAL NEWS : ಹಮ್ಮಿಗಿ ಡ್ಯಾಮ್ ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಡಾ ಚಂದ್ರು ಲಮಾಣಿ.

ಹಮ್ಮಿಗಿ ಡ್ಯಾಮ್ ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಡಾ ಚಂದ್ರು ಲಮಾಣಿ.

ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಹಮ್ಮಿಗಿ ಡ್ಯಾಮ್ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ *ಹಮ್ಮಿಗಿ ಡ್ಯಾಮ್* ತುಂಬಿ ಹರಿಯುತ್ತಿರುವ, ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಮಾನ್ಯ ಶಿರಹಟ್ಟಿ ಜನಪ್ರಿಯ ಶಾಸಕರಾದ ಡಾಕ್ಟರ್ ಚಂದ್ರು ಲಮಾಣಿ ಯವರು ಗಂಗಾಮಾತೆಗೆ ಪೂಜೆ ಸಲ್ಲಿಸಿ, ಡ್ಯಾಂ ಗೆ “ಬಾಗಿನ” ಸಮರ್ಪಿಸಿ, ಕ್ಷೇತ್ರ ಸಮೃದ್ಧಿಯಾಗಲಿ, ರೈತರ ಬಾಳು ಹಸನಾಗಲೆಂದು ಪ್ರಾರ್ಥಿಸಿದರು.

ಈ ಬಾರಿ ಸುರಿದ ಉತ್ತಮ ಮಳೆಯಿಂದ ಡ್ಯಾಂ ಭರ್ತಿಯಾಗಿರುವುದು ಸಂತಸದ ಸಂಗತಿ. ಇದರಿಂದಾಗಿ ಮುಂಡರಗಿ ತಾಲೂಕಿನ ರೈತರಿಗೆ ಅನುಕೂಲಕರವಾಗಲಿದೆ.

ಈ ವೇಳೆಗೆ ಮುಂಡರಗಿಯ ಮಂಡಲದ ಅಧ್ಯಕ್ಷರಾದ ಹೇಮಗೀರಿಶ ಹಾವಿನಾಳ ಪ್ರಧಾನ ಕಾರ್ಯದರ್ಶಿಗಳದ ಪ್ರಶಾಂತ ಗುಡದಪ್ಪನವರ & ಬಸವರಾಜ ಬಿಳಿಮಗ್ಗದ, ಹಾಲೇಶ ಇಟಿ, ಮಲ್ಲಿಕಾರ್ಜುನ ಹನಜಿ,ಹಮ್ಮಗಿ ಗ್ರಾ.ಪಂ ಸದಾಸ್ಯರಾದ ಕೋಟೆಪ್ಪ ಕಲಕೇರಿಯವರು ಯುವ ಮುಖಂಡರಾದ ಕುಮಾರಸ್ವಾಮಿಯ ಹಿರೇಮಠ ಯವರು ಸ್ಥಳೀಯ ಮುಖಂಡರು ಪ್ರಮುಖರು, ರೈತ ಬಾಂಧವರ, ಗುರು ಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು.

ವರದಿ: ವಿರೇಶ ಗುಗ್ಗರಿ

Leave a Reply

error: Content is protected !!