ಕುಕನೂರು : ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡಾಕೂಟವು ಪೋರಕವಾಗಿದ್ದು ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಅರೋಗ್ಯ ಪಡೆದು ಸದೃಢರಾಗಿ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಹೇಳಿದರು.
ತಾಲೂಕಿನ ಅಡೂರು ರಾಜೂರು ಪ್ರೌಢಶಾಲೆಯಲ್ಲಿ ಜರುಗಿದ ಕುಕನೂರು ಪೂರ್ವ ವಲಯ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಉತ್ತಮ ಅರೋಗ್ಯ, ಸದೃಢ ದೇಹ ಮನಸ್ಸು ಹೊಂದಲು ಸಾಧ್ಯ ಎಂದು ವೀರಭದ್ರಪ್ಪ ಅಂಗಡಿ ಹೇಳಿದರು.
ಕ್ರೀಡಾಕೂಟದಲ್ಲಿ ಪೂರ್ವ ವಲಯದ 9 ಶಾಲೆಯ ಕ್ರೀಡಾಪಟುಗಳು, ವಿವಿಧ ಬಗೆಯ ಆಟಗಳಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಕಾಳಿಂಗಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷ ವಿಜಯ್ ಕುಮಾರ್, ಸದಸ್ಯರಾದ ಬಸವರೆಡ್ಡಿ ಬಿಡನಾಳ್, ಭೀಮರಡ್ದೆಪ್ಪ ಮಾದಿನೂರು, ಕೋಟೇಶ್ ಗೊಂದಿ, ಶಾಂತಮ್ಮ ಮೂಲಿಮನಿ, ಶಿವಾನಂದ ಹೂಗಾರ್, ಶರಣಪ್ಪ ತಳವಾರ್, ಶೈನಾಜ್ ಬೇಗಂ, ದೇವಪ್ಪ ರಡ್ಡೇರ್ ಸೇರಿದಂತೆ ಪ್ರಮುಖರಾದ ದೇವೇಂದ್ರಪ್ಪ ಬಡಿಗೇರ್, ಜಗದೀಶ್ ತೊಂಡಿಹಾಳ್, ಶರಣಪ್ಪ ದೊಡ್ಡಮನಿ, ಶಿಲ್ಪಾ ಅಡೂರು, ವಿರುಪಾಕ್ಷಪ್ಪ, ಶರಣಪ್ಪ ತೊಂಡಿಹಾಳ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಶರಣಪ್ಪ ವಿರಾಪುರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.