ಹಾನಗಲ್ಲ ಕುಮಾರ ಮಹಸ್ವಾಮಿಗಳ 157ನೇ ಜಯಂತ್ಯೋತ್ಸವ ಪೂರ್ವಭವಿ ಸಭೆ
ಮುಂಡರಗಿ: ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಆಯೋಜನೆ ಮಾಡಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭೆ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳವರ 157 ನೇ ಜಯಂತಿಯನ್ನ, ಈ ಬಾರಿ ಮುಂಡರಗಿ ಪಟ್ಟಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಕುರಿತು ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ, ಹಾನಗಲ್ಲ ಕುಮಾರ ಮಹಸ್ವಾಮಿಗಳ ಜಯಂತಿ ಮಹೋತ್ಸವ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ಸಾನಿಧ್ಯವನ್ನ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ವಹಿಸಿದ್ದರು.
ಶ್ರೀಮಠದ ಉತ್ತರಾಧಿಕಾರಿಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿಜಿ ನೇತೃತ್ವದಲ್ಲಿ, ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಜಿ, ನಾಗನೂರು, ಮಣಕವಾಡ, ನರಗುಂದ, ಹೂವಿನ ಹಡಗಲಿ, ತುಪ್ಪದ ಕುರಹಟ್ಟಿ, ಹಿರೇಮಲ್ಲನಕೇರಿ, ನರಸಾಪುರ ಸೇರಿದಂತೆ ವಿವಿಧ ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸೆ.14 ರಿಂದ 24 ರ ವರೆಗೆ ಪ್ರತಿದಿನ ಹಾನಗಲ್ಲ ಕುಮಾರ ಸ್ವಾಮಿಗಳ ಜೀವನ ಚರಿತ್ರೆ, ಹಾಗೂ ಪಟ್ಟಣದ ವಾರ್ಡುಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಠಾಧೀಶರ ಪಾದಯಾತ್ರೆ ಹಮ್ಮಿಕೊಳ್ಳುವದರ ಮೂಲಕ ಸಮಾರಂಭವನ್ನ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲೆ ಹಲವು ಮುಖಂಡರು, ದೇಣಿಗೆ ಸಲ್ಲಿಸಿದರು.
ಈ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ಮಿಥುನಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ ಸೇರಿದಂತೆ ಶ್ರೀ ಮಠದ ಅಪಾರ ಭಕ್ತರು ಸಭೆಯಲ್ಲಿ ಭಾಗವಹಿಸಿತ್ತು.