ಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

You are currently viewing ಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಕುಕನೂರು : ನೂತನವಾಗಿ ಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು ಉದ್ಘಾಟನೆಯನ್ನು ಅನ್ನದಾನಿಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿಗಳು ಉದ್ಘಾಟನೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕು ವೃತ್ತಿ ನಿರತ ಫೋಟೋ, ವಿಡಿಯೋ ಗ್ರಾಪರ್ ಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಗದಗ್ ಜಿಲ್ಲಾ ಫೋಟೋ ವಿಡಿಯೋ ಗ್ರಾಪರ್ ಗಳ ಸಂಘದ ಅಧ್ಯಕ್ಷ ಎಸ್ ಎನ್ ಗೌಡರ್ ಸಂಘದ ಅಸ್ತಿತ್ವ ಮಹತ್ವದ ಬಗ್ಗೆ ತಿಳಿಸಿದರು. ಶರಣಪ್ಪ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರು ಸೇರಿದಂತೆ ಸಂಘದ 7 ತಾಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಸನ್ಮಾನ ಮಾಡಲಾಯಿತು. ಇದಕ್ಕೂ ಮುನ್ನ ಸಂಘದ ಸದಸ್ಯರು ಪಟ್ಟಣದಲ್ಲಿ ಬೈಕ್ ರಾಲಿ ನಡೆಸಿದರು.

ಕಾರ್ಯಕ್ರಮದಲ್ಲಿ ರಾಜಶೇಖರ್ ಸ್ಯಾಗೋಟಿ, ಕುಕನೂರು ತಾಲೂಕು ಅಧ್ಯಕ್ಷ ಮಹಮ್ಮದ್ ರಫಿ ಹಿರೇಹಾಳ್, ಕಾರ್ಯದರ್ಶಿ ಮಂಜುನಾಥ್ ತೋಟದ್ ಸೇರಿದಂತೆ ಸದಸ್ಯರಾದ ಮುರ್ತುಜಸಾಬ್ ಕಾಟ್ರಳ್, ಮಹದೇವಪ್ಪ ಶಿವಸಿಂಪಿ, ಹನುಮಂತಪ್ಪ ಬಂಗಿ, ಹುಸೇನ್ ಸಾಬ್, ಮಹಮ್ಮದ್ ರಫಿ, ಸಿದ್ದಪ್ಪ ಉಂಕಿ, ಚಂದ್ರು ಬಂಗಿ, ಇತರ ಸದಸ್ಯರು ಉಪಸ್ಥಿತರಿದ್ದರು.

Leave a Reply

error: Content is protected !!