ಯಲಬುರ್ಗಾ : ತಾಲೂಕಿನ ಸಂಗನಾಳ ಗ್ರಾಮದ ಎನ್ ಹೆಚ್ 367 ಹೆದ್ದಾರಿಯಲ್ಲಿ ಬೀಕರ ರಸ್ತೆ ಅಪಘಾತವಾಗಿದ್ದು, ಎರಡು ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಒಂದೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ NH 367 ಹೆದ್ದಾರಿಯಲ್ಲಿ (ಸಂಗನಾಳ ಕ್ರಾಸ್) ಕೊಪ್ಪಳದ ಕಾರ್ ಹಾಗೂ ಸಂಗನಾಳ ಗ್ರಾಮದ ಶಿಪ್ಟ್ ಡಿಸೈನರ್ ಕಾರುಗಳು ಮಧ್ಯೆ ಮುಖಾ ಮುಖಿ ಡಿಕ್ಕಿ ಸಂಭವಿಸಿದೆ. ವೇಗವಾಗಿ ಬಂದ ಕಾರುಗಳ ಮಧ್ಯ ಡಿಕ್ಕಿಯಾಗಿದೆ. ಕೊಪ್ಪಳ ತಾಲೂಕ ಟಣಕಲ್ ಗ್ರಾಮದ ಒಂದೂವರೆ ವರ್ಷದ ಸಂಪ್ರೀತ ಎಂಬ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಶಿಫ್ಟ್ ಡಿಸೈನರ್ ಕಾರಿನಲ್ಲಿದ್ದ ಸಂಗಪ್ಪ (60) ದೇವಪ್ಪ ಗಡಾದ ನಿವೃತ್ತ ಸೈನಿಕ ಇವರ ಬಲಗೈಗೆ ಹಾಗೂ ಮೊಣಕಾಲಿಗೆ ತೆರಚಿದ ಗಾಯಗಳಾಗಿವೆ. ಪ್ರಭುದೇವ (52) ತಂ. ಶಾಂತಪ್ಪ ಹೊಸ ಅಂಗಡಿ ಇವರಿಗೆ ತಲೆಗೆ ತೆರಚಿದ ಗಾಯಗಳಾಗಿವೆ. ಮತ್ತೊಂದು ಕಾರಿನಲ್ಲಿದ್ದ ಕೊಪ್ಪಳದ ಸಿದ್ದೇಶ್ವರ ನಗರದ ಮಹಾಲಕ್ಷ್ಮಿವಿ. ಕೊರಗಲಮಠ (11), ಇನ್ನುಳಿದ ಐದು ಜನರಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ಗಾಯವಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ತಿಳಿದು ಬಂದಿದೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.