ಗೃಹ ಲಕ್ಷ್ಮಿ ಫಲಾನುಭವಿಗಳೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ. !
ಪ್ರಜಾವೀಕ್ಷಣೆ ಡೆಸ್ಕ್: ಸರ್ಕಾರದ ಮಹಾಕ್ಷಾಂಶಿ ಯೋಜನೆಯಾದ ಗೃಹ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಈ ಯೋಜನೆಯಿಂದ ತಮ್ಮ ಜೀವನಲ್ಲಿ ಏನೆಲ್ಲ ಬದಲಾವಣೆ ತಂದಿದೆ ಎಂಬುದನ್ನು ಯೋಜನೆಯ ಫಲಾನುಭವಿಗಳು (ಯಜಮಾನಿಯರು) ಸಾಮಾಜಿಕ ತಾಲತಾಣಗಳಲ್ಲಿ ರೀಲ್ಸ್ಗಳ ಮೂಲಕ ತಮ್ಮಲ್ಲಿ ಆದ ಬದಲಾವಣೆಯನ್ನು ಹಂಚಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳಕ ಕೋರಿದ್ದಾರೆ.
‘ಸೆ.1 ರಿಂದ 30 ರವರೆಗೆ ಯುಟ್ಯೂಬ್, ಪೇಸ್‌ಬುಕ್, ಇನ್‌ಸ್ಟಾಗ್ರಾಂ ಗಳಲ್ಲಿ ಯಜಮಾನಿಯರು ರೀಲ್ಸ್ ಹಂಚಿಕೊಳ್ಳಬೇಕು. ಇದರಿಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ರೀಲ್ಸ್ಗೆ ನಾನು ವ್ಯಯಕ್ತಿಕವಾಗಿ ಬಹುಮಾನ ನೀಡುತ್ತೇನೆ’ ಎಂದು ಘೋಷಿಸಿದ್ದಾರೆ.
ಗೃಹ ಲಕ್ಷ್ಮೀ ಫಲಾನುಭವಿಗಳೆ ಮತ್ತೇಕೆ ತಡ, ಗೃಹ ಲಕ್ಷ್ಮಿ ಯೋಜನೆಯಿಂದ ನಿಮ್ಮ ಬದುಕಿನಲ್ಲಾದ ಬದಲಾವಣೆ ಕುರಿತು ಕೂಡಲೇ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಅತಿ ಹೆಚ್ಚು ವೀಕ್ಷೆಣೆಯಾಗಲು ಶೇರ್ ಮಾಡಿ. ನೀವು ಕೂಡ ಬಹುಮಾನವನ್ನು ಗೆಲ್ಲಬಹುದು.