LOCAL NEWS : ವಿವಿಧ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಬ್ಲಾಕ್ ಕಾಂಗ್ರೆಸ್ ನಿಂದ ರಾಯರೆಡ್ಡಿ ಅವರ 68ನೇ ಜನ್ಮ ದಿನ ಆಚರಣೆ.!!

You are currently viewing LOCAL NEWS : ವಿವಿಧ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಬ್ಲಾಕ್ ಕಾಂಗ್ರೆಸ್ ನಿಂದ ರಾಯರೆಡ್ಡಿ ಅವರ 68ನೇ ಜನ್ಮ ದಿನ ಆಚರಣೆ.!!

ವಿವಿಧ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಬ್ಲಾಕ್ ಕಾಂಗ್ರೆಸ್ ನಿಂದ ರಾಯರಡ್ಡಿ ಅವರ 68ನೇ ಜನ್ಮ ದಿನ ಆಚರಣೆ.!!

ಯಲಬುರ್ಗಾ : ಶಾಸಕ, ಸಿ ಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅವರ 68ನೇ ಜನ್ಮ ದಿನವನ್ನು ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ಬ್ಲಾಕ್ ಕಾಂಗ್ರೆಸ್ ಮತ್ತು ಅಭಿಮಾನಿ ಬಳಗದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಯಲಬುರ್ಗಾ ಮತ್ತು ಕುಕನೂರು ಅವಳಿ ತಾಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಮತ್ತು ಯುವ ಘಟಕದಿಂದ ಶಾಸಕ ಬಸವರಾಜ್ ರಾಯರಡ್ಡಿಯವರ 68 ನೇ ಜನುಮ ದಿನವನ್ನು ಸರಳ ಮತ್ತು ಸಂಕೇತಿಕವಾಗಿ ಶುಕ್ರವಾರ ಆಚರಣೆ ಮಾಡಲಾಯಿತು.

ಯಲಬುರ್ಗಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಕೇಕ್ ಕತ್ತರಿಸುವ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ ಮಾತನಾಡಿ, ಸನ್ಮಾನ್ಯ ಬಸವರಾಜ್ ರಾಯರಡ್ಡಿ ಅವರು ತಮ್ಮ 40 ವರ್ಷದ ರಾಜಕೀಯದಲ್ಲಿ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸೇವೆ ಮಾಡಿದ್ದಾರೆ. ಮುಂಬೈ ಕರ್ನಾಟಕದ ಇತರ ಕ್ಷೇತ್ರಗಳನ್ನು ಮೀರಿಸುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದಲ್ಲಿಯೇ ಅತ್ಯಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ರಾಯರಡ್ಡಿ ಅವರು ಇಲ್ಲಿ ಮಾಡಿದ್ದಾರೆ. ಇದು ಹಿಂದುಳಿದ ತಾಲೂಕು ಎನಿಸುವುದಿಲ್ಲ ಬದಲಾಗಿ ಮುಂಬೈ ಕರ್ನಾಟಕದ ಕೆಲವು ತಾಲೂಕುಗಳನ್ನು ಮೀರಿಸುವಂತೆ ಇಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ರಸ್ತೆ, ರೈಲ್ವೆ, ವಸತಿ ಶಾಲೆಗಳು, ಇಂಜಿನಿಯರ್ ಕಾಲೇಜು, ಕೌಶಲ್ಯ ಕೇಂದ್ರ ಇನ್ನಿತರ ಜನಪರ ಕಾರ್ಯಗಳು ಶಾಸಕ ಬಸವರಾಜ್ ರಾಯರಡ್ಡಿ ಅವರ ಹೆಸರನ್ನು ಹೇಳುತ್ತಿವೆ ಎಂದು ಬಸವರಾಜ್ ಉಳ್ಳಾಗಡ್ಡಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಒಂದು ಲಕ್ಷದವರೆಗೂ ಜೀವ ವಿಮೆ ಮಾಡಿಸಲಾಯಿತು. ಅಲ್ಲದೇ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸೊಳ್ಳೆ ಪರದೆ ಮತ್ತು ಕಾಯಿಲ್ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಇದಕ್ಕೂ ಮುನ್ನ ಕುಕನೂರು ಮತ್ತು ಯಲಬುರ್ಗಾ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಂಪಲು, ಬ್ರೆಡ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ ಎಂ ಶಿರೂರು, ಹನುಮಂತಪ್ಪ ಚೆಂಡೂರು, ವೀರನಗೌಡ ಪೊಲೀಸ್ ಪಾಟೀಲ್, ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಸಂಗಮೇಶ್ ಗುತ್ತಿ, ಈಶ್ವರ್ ಆಟಮಾಳಗಿ, ಅಶೋಕ್ ತೋಟದ್, ಈರಪ್ಪ ಕುಡಗುಂಟಿ, ಮಹಿಳಾ ಕಾಂಗ್ರೆಸ್ ನ ಸಾವಿತ್ರಿ ಗೊಲ್ಲರ, ಪರಿದಾ ಬೇಗಂ, ಗಿರಿಜಾ ಸಂಘಟಿ, ಸೇರಿದಂತೆ ಯುವ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

– ಈರಯ್ಯ ಕುರ್ತಕೋಟಿ. ಪ್ರಜಾವೀಕ್ಷಣೆ ಸುದ್ದಿ ಜಾಲ.

Leave a Reply

error: Content is protected !!