ವಾಹನ ಸವಾರರೆ ಎಚ್ಚರ..! ಎಚ್ಚರ..! : ದಂಡ ಬೀಳೊದು ಗ್ಯಾರಂಟಿ..!
ಲಕ್ಷ್ಮೇಶ್ವರ : ಪಟ್ಟಣದ ಪೊಲೀಸ್ ಠಾಣೆಯಿಂದ ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಂಬರ್ ಪ್ಲೇಟ್ ಇಲ್ಲದೇ ಇರುವ ಮತ್ತು ಡಿಫೆಕ್ಟಿವ್ ನಂಬರ್ ಪ್ಲೇಟರುವ ಹೆಲ್ಮೆಟ್ ಇಲ್ಲದೆ ಇರುವ, ಮತ್ತು ಮೂರು ಜನ ಹತ್ತಿ ಓಡಾಡುವ ಬೈಕ್ ಸವಾರರ ಸುಮಾರು ಐವತ್ತಕ್ಕೂ ಹೆಚ್ಚು ಬೈಕ್ ಗಳನ್ನು ಸೀಜ್ ಮಾಡಿ ಫೈನ್ ಹಾಕಲಾಯಿತು.
ಲಕ್ಷ್ಮೇಶ್ವರ ಪಿ ಎಸ್ ಐ,ಮತ್ತು ಶಿರಹಟ್ಟಿ ಸಿ ಪಿ ಐ ರವರು ಹಾಜರಿದ್ದು ಸಿಪಿಐ ಶಿರಹಟ್ಟಿ ರವರು ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಅರಿತುಕೊಂಡು ಕಾನೂನು ಪಾಲನೆ ಮಾಡುವಂತೆ ಹಾಗೂ ವಾಹನಗಳ ಸರಿಯಾದ ದಾಖಲಾತಿಗಳನ್ನು ಹೊಂದಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಿ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡುವಂತೆ ತಿಳಿಸಿದರು.
ಪಿಎಸ್ಐ ಈರಣ್ಣ ರಿತ್ತಿ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಇನ್ನೂ ಹೆಚ್ಚಿನ ವಾಹನಗಳನ್ನು ಹಿಡಿದು ದಂಡ ವಿಧಿಸಲಾಗುವುದು ಎಂದು ತಿಳಿಸಿದರು.