BIG NEWS : ಮದ್ಯ ಪ್ರೀಯರಿಗೆ ಶಾಕ್‌…! : ಈ ದಿನಗಳು ಮದ್ಯ ಮಾರಾಟ ನಿಷೇಧ!

You are currently viewing BIG NEWS :  ಮದ್ಯ ಪ್ರೀಯರಿಗೆ ಶಾಕ್‌…! : ಈ ದಿನಗಳು ಮದ್ಯ ಮಾರಾಟ ನಿಷೇಧ!

ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣಪತಿ ವಿಸರ್ಜನೆ : 3ನೇ, 5ನೇ ದಿನ ಮತ್ತು 11 ನೇ ದಿನಗಳಂದು ಮದ್ಯ ಮಾರಾಟ ನಿಷೇಧ!

ಬೆಂಗಳೂರು : ದೇಶದ್ಯಂತ ಇಂದಿನಿಂದ ಭಕ್ತಿ ವಾವದಿಂದ ಗಣೇಶ ಹಬ್ಬದ ಆರಚಣೆ ಆರಂಭವಾಗಿದ್ದು, ಈ ಕುರಿತು ಕೇಲವೂಂದು ದಿನಗಳವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ನಿಷೇಧಿಸಲಾಗಿದೆ. ಈ ಹಬ್ಬದ ಪ್ರಯುಕ್ತ ಗಣಪತಿ ವಿಸರ್ಜನೆ ದಿನಗಳಾದ 3ನೇ, 5ನೇ ದಿನ ಮತ್ತು 11 ನೇ ದಿನಗಳಂದು ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ, ಮದ್ಯದಂಗಡಿ, ಬಾರ್-ರೆಸ್ಟೋರೆಂಟ್‌ಗಳನ್ನು ತೆರೆಯದಂತೆ ಅಬಕಾರಿ ಇಲಾಖೆ ಸೂಚನೆ ನೀಡಿದೆ.

ಗಣೇಶನ ವಿಸರ್ಜನೆಯ ಮೂರನೇ ದಿನವಾದ ಸೆ.09 ರಂದು ಬೆಳಿಗ್ಗೆ 06 ಗಂಟೆಯಿಂದ ಸೆ.10 ರ ಬೆಳಿಗ್ಗೆ 06 ಗಂಟೆಯವರೆಗೆ ಮತ್ತು ಐದನೇ ದಿನವಾದ ಸೆ.11 ರಂದು ಬೆಳಿಗ್ಗೆ 06 ಗಂಟೆಯಿAದ ಸೆ.12 ರ ಬೆಳಿಗ್ಗೆ 06 ಗಂಟೆಯವರೆಗೆ ನಿಷೇಧಿಸಲಾಗಿದೆ ಎಂದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 ರನ್ವಯ ಪ್ರದತ್ತ ಅಧಿಕಾರ ಚಲಾಯಿಸಿ, ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಅದೇ ರೀತಿ ಗಣಪನ ವಿಸರ್ಜನೆಯ 11ನೇ ದಿನವಾದ ಸೆ.17 ರಂದು ಬೆಳಿಗ್ಗೆ 06 ಗಂಟೆಯಿಂದ ಸೆ.18 ಬೆಳಿಗ್ಗೆ 06 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯದಂಗಡಿ, ಬಾರ್-ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ. ಈ ಆದೇಶವು ರಾಜ್ಯ ವಿವಿಧ ಕೆಎಸ್‌ಪಿಬಿಸಿಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

Leave a Reply

error: Content is protected !!