ಕುಕನೂರು ಪಟ್ಟಣಕ್ಕೆ ಅತ್ಯಾದುನಿಕ ಪಾಲಿ ಕ್ಲಿನಿಕ್ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು.!
ಕುಕನೂರು : ಶಾಸಕ ಬಸವರಾಜ್ ರಾಯರಡ್ಡಿ ಅವರು ತಮ್ಮ 68 ನೇ ಹುಟ್ಟುಹಬ್ಬದ ಪ್ರಯುಕ್ತ ಕುಕನೂರು ತಾಲೂಕಿನ ಜನತೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಕುಕನೂರು ಪಟ್ಟಣಕ್ಕೆ ನೂತನವಾಗಿ ಅತ್ಯಾದುನಿಕ ಪಾಲಿ ಕ್ಲಿನಿಕ್ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಆಗುವಲ್ಲಿ ಕಾರಣಿಕರ್ತರಾಗಿದ್ದಾರೆ.
ಇದುವರೆಗೂ ಅತ್ಯಾದುನಿಕ ಸೌಲಭ್ಯಗಳೊಂದಿಗೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಪಾಲಿ ಕ್ಲಿನಿಕ್ ಆಸ್ಪತ್ರೆಗಳು ಇನ್ನುಮುಂದೆ ತಾಲೂಕು ಕೇಂದ್ರದಲ್ಲಿಯೂ ಸೌಲಭ್ಯ ಸಿಗಲಿದೆ. ಕುಕನೂರಿನ ಪಶು ವೈದ್ಯಕೀಯ ಆಸ್ಪತ್ರೆಯು ಇನ್ನು ಮುಂದೆ ಜಿಲ್ಲಾ ಹಂತದ ಆಸ್ಪತ್ರೆಗಳಂತೆ ಅದ್ಯಾದುನಿಕ ಸೌಲಭ್ಯಗಳೊಂದಿಗೆ ಪಾಲಿಕ್ಲಿನಿಕ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ. ಜಿಲ್ಲಾ ಹಂತದ ತಜ್ಞ ಪಶು ವೈದ್ಯಕೀಯ ಆಸ್ಪತ್ರೆಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸಿ ರಾಜ್ಯ ಸರ್ಕಾರವು ಪ್ರಥಮ ಹಂತದಲ್ಲಿ ರಾಜ್ಯದ ಆಯ್ದ 20 ತಾಲೂಕು ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ ಗಳನ್ನಾಗಿ ಮೇಲದರ್ಜೆಗೆ ಏರಿಸಲು ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ.
ಸರ್ಕಾರವು ತಾಲೂಕು ಮಟ್ಟದ 20 ಪಶು ಆಸ್ಪತ್ರೆ ಗಳನ್ನು ಪಾಲಿಕ್ಲಿನಿಕ್ಗಳಾಗಿ ಮೇಲದರ್ಜೆಗೆ ಏರಿಸಲು ಗುರುತಿಸಿದ್ದು ಅದರಲ್ಲಿ ಕೊಪ್ಪಳ ಜಿಲ್ಲೆಯ ಪೈಕಿ ಕುಕನೂರು ಪಶು ಆಸ್ಪತ್ರೆಯು ಕೂಡಾ ಸೇರಿದೆ.
ರೈತರ ದನ ಕರುಗಳು, ಆಡು, ಮೇಕೆ ಜಾನುವಾರುಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಇದುವರೆಗೂ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಪಾಲಿ ಕ್ಲಿನಿಕ್ ಗಳನ್ನು ರಾಜ್ಯ ಸರ್ಕಾರ ತಾಲೂಕು ಕೇಂದ್ರಗಳಿಗೂ ವಿಸ್ತರಿಸಿದ್ದು ಮುಂಗಡ ಪತ್ರದಲ್ಲಿ ಘೋಷಿಸಿದಂತೆ ಮೊದಲ ಹಂತದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 20 ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಗಳನ್ನು ಗುರುತಿಸಿ ಅತ್ಯಾದುನಿಕ ಸೌಲಭ್ಯಗಳೊಂದಿಗೆ ಉನ್ನತಿಕರಣಗೊಳಿಸುತ್ತಿದೆ.
ಅತ್ಯಾದುನಿಕ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಮಂಜೂರಿಗೆ ಕಾರಣಿಕರ್ತರಾದ ಶಾಸಕ, ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅವರನ್ನು ಜನತೆಯ ಪರವಾಗಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ ಅಭಿನಂದನೆ ತಿಳಿಸಿದ್ದಾರೆ.