LOCAL BREAKING : ಅರಕೇರಿ ಗ್ರಾಮದಲ್ಲಿ ನಡೆದ ಘಟನೆ : ಶೀಲ ಶಂಕಿಸಿ ಪತ್ನಿಯ ಬರ್ಬರವಾಗಿ ಹತ್ಯೆ ಮಾಡಿದ ಪತಿ!

You are currently viewing LOCAL BREAKING : ಅರಕೇರಿ ಗ್ರಾಮದಲ್ಲಿ ನಡೆದ ಘಟನೆ : ಶೀಲ ಶಂಕಿಸಿ ಪತ್ನಿಯ ಬರ್ಬರವಾಗಿ ಹತ್ಯೆ ಮಾಡಿದ ಪತಿ!

BREAKING NEWS : ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟ ಪತಿ, ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ!

ಕುಕನೂರು : ತಾಲೂಕಿನ ಗ್ರಾಮವೊಂದರಲ್ಲಿ ಪತ್ನಿ ಶೀಲದ ಮೇಲೆ ಸಂಶಯ ಪಟ್ಟು ಪತಿ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಆರಕೇರಿ ಗ್ರಾಮದಲ್ಲಿ ಮೊನ್ನೆ ಸೆ.6ಕ್ಕೆ ತಡ ರಾತ್ರಿ (1:00 ಗಂಟೆಗೆ) ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆ ಗೀತಾ ಮತ್ತು ಆರೋಪಿ ದೇವರೆಡ್ಡೆಪ್ಪ ತಂದೆ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ ಎಂದು ತಿಳಿದು ಬಂದಿದೆ. ಪತ್ನಿಯ ಶೀಲದ ಮೇಲೆ ಶಂಕಿಸಿ ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ ಅವಳನ್ನು ಮೊನ್ನೆ ಸೆ.6ಕ್ಕೆ ತಡ ರಾತ್ರಿ ಸುಮಾರಿಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಮಾಹಿತಿಯಿಂದ ತಿಂದು ಬಂದಿದೆ.

ಬಳಿಕ ಆರೋಪಿ ಎ1 ದೇವರೆಡ್ಡೆಪ್ಪನೊಂದಿಗೆ ಎ2 ಮತ್ತು ಇತರರು ಸೇರಿಕೊಂಡು ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು ಮೃತಳ ತಂದೆ ತಾಯಿಗೆ ಸುಳ್ಳು ಹೇಳಿ ಮೃತ ದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಕಿಚ್ಚು ಮಾಡಿ ಸುಟ್ಟು ಹಾಕಲಾಗಿದೆ.

ಈ ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಎಂದು ಮೃತಳ ಸಹೋದರ ಸಿದ್ದರೆಡ್ಡಿ ಪೊಲೀಸರಿಗೆ ಮನವಿ ಮಾಡಿದ್ದಾನೆ. ಈ ಕುರಿತು ಕುಕನೂರು ಪೊಲೀಸ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಪಿಎಸ್‌ಐ ಟಿ ಗುರುರಾಜ್‌ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾ ವೀಕ್ಷಣೆ ಸುದ್ದಿಜಾಲ:-

Leave a Reply

error: Content is protected !!