ಮುಖ್ಯಮಂತ್ರಿ ರೇಸ್ ನಲ್ಲಿ ನಾನೂ ಇದ್ದೇನೆ : ಬಸವರಾಜ್ ರಾಯರೆಡ್ಡಿ ಅಚ್ಚರಿ ಹೇಳಿಕೆ.
ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ
ಕೊಪ್ಪಳ : ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿಗಳಲ್ಲಿ ನಾನೂ ಕೂಡಾ ಇದ್ದೇನೆ, ಕಲ್ಯಾಣ ಕರ್ನಾಟಕದ ನಾಯಕರಲ್ಲಿ ನಾನೇ ಮುಂಚೂಣಿಯಲ್ಲಿ ಇದ್ದೇನೆ, ಸದ್ಯಕ್ಕೆ ಸಿ ಎಂ ಸ್ಥಾನ ಖಾಲಿ ಇಲ್ಲ, ಬೇರೆಯವರಿಗೆ ಕೊಡುವುದಾದರೆ ನಮ್ಮನ್ನೂ ಪರಿಗಣಿಸಲಿ ಎಂದು ಶಾಸಕ, ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಮೂರು ವರ್ಷದ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರೆ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಪಕ್ಷದಲ್ಲಿ ಇಲ್ಲವೇ ಇಲ್ಲ ಎಂದು ರಾಯರಡ್ಡಿ ಹೇಳಿದ್ದಾರೆ.
ಪಕ್ಷದಲ್ಲಿ ಕೆಲವು ಹಿರಿಯರಿದ್ದಾರೆ, ಲಿಂಗಾಯತ ಕೋಟಾದಲ್ಲಿ ಸ್ಥಾನ ಕೊಟ್ಟರೆ ನಾನೂ ಮುಂಚೂಣಿ ನಾಯಕ ಆಗಿದ್ದು, ನನಗೆ ಕೊಡಲಿ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದ್ದಾರೆ.