ಮಕ್ಕಳಲ್ಲಿನ ಪ್ರತಿಭೆಯ ಅನಾವರಣ ವೇದಿಕೆ ಪ್ರತಿಭಾ ಕಾರಂಜಿ : ಶರಣಪ್ಪ ರಾವಣಕಿ
ಕುಕನೂರು : ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಶರಣಪ್ಪ ರಾವಣಕಿ ಹೇಳಿದರು.
ತಾಲೂಕಿನ ಯಡಿಯಾಪುರ ಗ್ರಾಮದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಕಲೆ ಸಂಸ್ಕೃತಿ ಯ ತವರು ಕನ್ನಡನಾಡಿನಲ್ಲಿ ಕಲೆ ಸಂಸ್ಕೃತಿ, ಪರಂಪರೆ ಬಿಂಬಿಸಲು ಶಾಲಾ ವಿದ್ಯಾರ್ಥಿಗಳ ಅವಧಿಯಲ್ಲಿಯೇ ಸರಕಾರ ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮಕ್ಕೆ ಹೆಚ್ಚು ಉತ್ತೇಜನ ಕೊಡುತ್ತಿದ್ದು ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿಗಳಿಸಲು ವೇದಿಕೆ ಉತ್ತಮ ಅವಕಾಶ’ ಎಂದು ಶರಣಪ್ಪ ರಾವಣಕಿ ಹೇಳಿದರು.
ಇದಕ್ಕೂ ಮುನ್ನ ಎತ್ತಿನ ಬಂಡಿಯಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಂಸ್ಕೃತಿ, ಇತಿಹಾಸ ಬಿಂಬಿಸುವ ಮಹನೀಯರ ವೇಷ ಭೂಷಣದೊಂದಿಗೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮುಖ್ಯ್ಯೊಪಾಧ್ಯಾಯ ಹನುಮಂತಪ್ಪ ಬಿನ್ನಾಳ್, ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದಲಿಂಗಪ್ಪ ಹಂಚಿನಾಳ, ಗ್ರಾ. ಪಂ ಅಧ್ಯಕ್ಷ ವಿರೂಪಾಕ್ಷಪ್ಪ ತಳಕಲ್, ಸಿದ್ದಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಂದಪ್ಪ ಜವಳಿ, ಕಾರ್ಯದರ್ಶಿ ಹರೀಶ್ ಹಿರೇಮಠ, ಶಿಕ್ಷಕ ಬಸವರಾಜ್ ಮೇಟಿ, ಬಿ ಆರ್ ಪಿ ಬಸವರಾಜ್ ಅಂಗಡಿ, ಮಾರುತಿ ತಳವಾರ್, ಉಮೇಶ್ ಕಂಬಳಿ, ಸಿ ಆರ್ ಪಿ ಪೀರ್ ಸಾಬ್ ದಫೆದಾರ್, ಮಂಜುನಾಥಯ್ಯ ತೆಗ್ಗಿನಮನಿ, ಶಿವಯ್ಯ ಹಿರೇಮಠ, ಎಸ್ ಡಿ ಎಂ ಸಿ ಸದಸ್ಯರು ಇತರರು ಉಪಸ್ಥಿತರಿದ್ದರು.