ವಿಕಾಸ ಸೌಹಾರ್ದ ಕೋ. ಆಪ್. ಬ್ಯಾಂಕ್ ನ 18 ನೇ ಶಾಖೆ ಕಾರ್ಯಾರಂಭ.
ಕುಕನೂರು : ಹೊಸಪೇಟೆಯ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ತನ್ನ 18 ನೇ ಶಾಖೆಯನ್ನು ಕುಕನೂರು ಪಟ್ಟಣದಲ್ಲಿ ತೆರೆದಿದ್ದು ಸೆ.16. ರಿಂದ ಕಾರ್ಯಾರಂಭ ಮಾಡಲಿದೆ.
ಬ್ಯಾಂಕ್ ನ 18 ನೇ ಶಾಖೆಯ ಉದ್ಘಾಟನೆ, ಪ್ರಾರಂಭದ ಕುರಿತು ಪಟ್ಟಣದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಕಾಸ ಸೌಹಾರ್ದ ಕೋ. ಆಪರೇಟಿವ್ ಅಧ್ಯಕ್ಷ ವಿಶ್ವನಾಥ್ ಚ. ಹಿರೇಮಠ, ಕಳೆದ 27 ವರ್ಷಗಳಿಂದ ಬ್ಯಾಂಕಿಂಗ್ ಸೇವೆಯಲ್ಲಿ ಗುರುತಿಸಿಕೊಂಡಿರುವ ವಿಕಾಸ ಸೌಹಾರ್ದ ಬ್ಯಾಂಕ್ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿದ್ದು ಕುಕನೂರು ಪಟ್ಟಣದಲ್ಲಿ ಸೆ 16 ರಿಂದ ನೂತನ ಶಾಖೆಯ ಕಾರ್ಯ ಆರಂಭ ಮಾಡಲಿದೆ ಎಂದು ಹೇಳಿದರು.
ಈಗಾಗಲೇ ಕುಕನೂರು ಪಟ್ಟಣ, ತಾಲೂಕಿನ ಇತರ ಹಳ್ಳಿಗಳ ಸುಮಾರು 6 ಸಾವಿರ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ತಮ್ಮ ಸಿಬ್ಬಂದಿಗಳು ಬ್ಯಾಂಕ್ ನೀಡುವ ಸೇವೆಗಳನ್ನು ಪರಿಚಯ ಮಾಡಿದ್ದಾರೆ. ರೈತರು, ಸಣ್ಣ ಉದ್ದಿಮೆದಾರರಿಂದ ಹಿಡಿದು ಎಲ್ಲ ನಾಗರೀಕ ಗ್ರಾಹಕ ಸೇವೆಗಳು ವಿಕಾಸ ಸೌಹಾರ್ದ ಬ್ಯಾಂಕ್ ಕೊಡುತ್ತದೆ.
ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಿಗುವ ಎಲ್ಲ ಸೇವೆಗಳು ವಿಕಾಸ ಸೌಹಾರ್ದ ಬ್ಯಾಂಕ್ ಒದಗಿಸುತ್ತಿದ್ದೆ, ವಿಕಾಸ ಸೌಹಾರ್ದ ಕೋ ಆಪ್ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಲೈಸೆನ್ ಪಡೆದಿದ್ದು ಸ್ವಂತ ಐ ಎಫ್ ಎಸ್ ಸಿ ಕೋಡ್ ಹೊಂದಿದೆ.
ಎಲ್ಲ ಬಗೆಯ ವಾಣಿಜ್ಯಾತ್ಮಕ ಸೇವೆಗಳು, ಯು ಪಿ ಐ, ಎ, ಪಿ, ಐ, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರ ಅಗತ್ಯತೆಯ ಎಲ್ಲ ಸೇವೆಗಳನ್ನು ವಿಕಾಸ ಸೌಹಾರ್ದ ಬ್ಯಾಂಕ್ ಒದಗಿಸುತ್ತದೆ ಎಂದು ವಿಶ್ವನಾಥ್ ಹಿರೇಮಠ ಅವರು ತಿಳಿಸಿದರು.
18 ನೇ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಹಾಲಕೇರಿ ಅನ್ನದಾನಿಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಕುಕನೂರು ಅನ್ನದಾನಿಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು ಶಾಖೆಯ ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ರಮೇಶ್ ಪುರೋಹಿತ, ಚಂದ್ರಪ್ರಕಾಶ್, ಬಸವರಾಜ್ ದಿಬ್ಬದ್ ಇತರರು ಉಪಸ್ಥಿತರಿದ್ದರು.