ಹೊಸಪೇಟೆ (ವಿಜಯನಗರ) : ಜಲ ಜೀವನ ಮಿಷನ್ ಅನುಷ್ಠಾನದ ಕುರಿತು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ ನಡೆಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ವಿಶ್ವ ಬ್ಯಾಂಕನೊAದಿಗೆ ಮಾಡಿಕೊಂಡಿರುವ ಒಡಂಬಡಿಕೆಯAತೆ ಗ್ರಾಮ ಪಂಚಾಯಿತಿಗಳಲ್ಲಿ ನಿರಂತರ ಕುಡಿಯುವ ನೀರು ಸರಬಾರಾಜು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಸಕ್ರೀಯಗೊಳಿಸುವ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ವಿಜಯನಗರ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಫೀಡ್ ಬ್ಯಾಕ್ ಪೌಂಡೇಷನ್ ವತಿಯಿಂದ ಜಿಲ್ಲೆಯ ಎ.ಇ.ಇ., ಎ.ಇ., ಜೆ.ಇ., ಇ.ಓ., ಡಿ.ಟಿ.ಎಸ್.ಯು., ಡಬ್ಲ್ಯೂ.ಎ.ಎಸ್.ಹೆಚ್.ಪಿ.ಎಂ.ಯು., ಐ.ಎಸ್.ಆರ್.ಎ., ಐ.ಎಸ್.ಎ ಡಬ್ಲ್ಯೂ.ಕ್ಯೂ.ಎಂ.ಐ.ಎಸ್ ಮತ್ತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಆಯೋಜನೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಷಾ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದರ ಮುಖಾಂತರ ಆಗುವ ಪ್ರಯೋಜನೆಗಳನ್ನು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಮೂಲಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತಿದೆ. ಗ್ರಾಮ ಪಂಚಾಯಿತಿ ಸಕ್ರೀಯಗೊಳಿಸುವ ಮಟ್ಟದಲ್ಲಿ ಪ್ರತ್ಯೇಕವಾಗಿ ವಿ.ಡಬ್ಲ್ಯೂ.ಎಸ್.ಸಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸಿ ನೀರು ಸರಬರಾಜಿಗೆ ಸಂಬAಧಿಸಿದ ಖರ್ಚುವೆಚ್ಚಗಳನ್ನು ಖಾತೆಯಿಂದ ನಿಭಾಯಿಸುವುದರಿಂದ ಗ್ರಾಮ ಪಂಚಾಯಿತಿಗಳು ಅರ್ಥಿಕವಾಗಿ ಸದೃಡತೆಯನ್ನು ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿಗಳಾದ ಜಾಫರ್ ಶರೀಫ್ ಸುತಾರ್ ಅವರು ಕಾರ್ಯಾಗಾರ ಕುರಿತು ಮಾತನಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಾಪಾಲಕ ಅಭಿಯಂತರರಾದ ದೀಪಾ ಎಸ್ ಅವರು ವಾಸ್ತವಿಕವಾಗಿ ಮಾತನಾಡಿದರು.
ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಆಶೋಕ್ ತೋಟದ, ಗುರುಗಾವ್ ಫೀಡ್‌ಬ್ಯಾಕ್ ಪೋಂಡೇಶನ್ ಸಿಇಓ ಅಜಯ್ ಸೀನಾ, ರಾಜ್ಯ ಹೆಚ್.ಆರ್.ಡಿ, ಸಮಾಲೋಚಕರಾದ ಜಗದೀಶ ಸಿ., ಡಬ್ಲ್ಯೂ.ಕ್ಯು ಎಂ.ಎಸ್, ಸಮಾಲೋಚಕರಾದ ನಿಶಾತ್ ಸಾಧಿಯಾ, ಬೆಂಗಳೂರು ಜಿ.ಡಬ್ಲ್ಯೂ.ಎಂ. ಸಮಾಲೋಚಕರಾದ ವಿನೋದ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಮಹೇಶ್ವರಿ ಎಸ್ ಅವರು ಸ್ವಾಗತಿಸಿದರು. ಡಿ.ಟಿ.ಎಸ್.ಯು ಸಾಮಾಜಿಕ ಅಭಿವೃದ್ಧಿ ಸಮಾಲೋಚಕರಾದ ಮಂಜುನಾಥ ಎಸ್. ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ಜಿಲ್ಲೆಯ ಎ.ಇ.ಇ., ಎ.ಇ., ಜೆ.ಇ., ಇ.ಓ., ಡಿ.ಟಿ.ಎಸ್.ಯು., ಡಬ್ಲ್ಯೂ.ಎ.ಎಸ್.ಹೆಚ್.ಪಿ.ಎಂ.ಯು., ಐ.ಎಸ್.ಆರ್.ಎ., ಐ.ಎಸ್.ಎ ಡಬ್ಲ್ಯೂ.ಕ್ಯೂ.ಎಂ.ಐ.ಎಸ್ ಮತ್ತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗು ಪಾಲ್ಗೊಂಡಿದ್ದರು.