BIG NEWS : ಯಲಬುರ್ಗಾದಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆ ಅತ್ಯಾಚಾರ : ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ!!
ಕೊಪ್ಪಳ : 2022ರಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆನೇ ಅತ್ಯಾಚಾರ ಮಾಡಿರುವ ಆರೋಪದಡಿಯಲ್ಲಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಪ್.ಟಿ.ಎಸ್.ಸಿ-1, (ಪೋಕ್ಸ್) ನ್ಯಾಯಾಲಯು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಆದೇಶ ನೀಡಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಲಬುರ್ಗಾ ಪಟ್ಟಣದ ನಿವಾಸಿ ಆದ ಅಪರಾಧಿ ಬಸವರಾಜ ತಂದೆ ವೇಂಕಟೇಶ ಭಜಂತ್ರಿ (23 ವರ್ಷ) ಎಂಬಾತನು ಸ್ವಂತ ತನ್ನ ಮಗಳ ಮೇಲೆಯ ಅತ್ಯಾಚಾರ ಆರೋಪಿಸಲಾಗಿತ್ತು. ಇದೀಗ ಇಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಪ್.ಟಿ.ಎಸ್.ಸಿ-1, (ಪೋಕ್ಸ್) ನ್ಯಾಯಾಲಯು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20,000 ರೂ.ಗಳ ದಂಡ ವಿಧಿಸಿ ಆದೇಶ ನೀಡಿದೆ.
ಈತನು ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿ ಬಲವಂತವಾಗಿಯೇ ಭಲತ್ಕಾರ ಸಂಭೋಗ ಮಾಡಿದ್ದು ಸಾಬೀತಾಗಿರುತ್ತದೆ. ಈ ಪ್ರಕರಣವು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಠಾಣೆಯ ಗುನ್ನ ನಂ. 122/2022 ಕಲಂ, 376(2)(ಐ) ಐ.ಪಿ.ಸಿ ಹಾಗೂ 6 ಫೋಕ್ಟೋ ಕಾಯ್ದೆ ನೇದ್ದರ ಅಡಿಯಲ್ಲಿ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಬಳಿಕ ಸದರಿ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಯಾಗಿ ಅಂದಿನ ವೀರಾರಡ್ಡಿ ಸಿ.ಪಿ.ಐ, ಯಲಬುರ್ಗಾ ವೃತ್ತ ಮುಂದುವರೆಸಿ ಪ್ರಕರಣದಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿತನ ವಿರುದ್ಧ ತನಿಖಾಧಿಕಾರಿಯು ಮಾನ್ಯ ಹೆಚ್ಚುವರಿ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಪ್.ಟಿ.ಎಸ್.ಸಿ-1, (ಪೋಕ್ಸ್) ನ್ಯಾಯಾಲಯ, ಕೊಪ್ಪಳ ರವರಲ್ಲಿಗೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದು, ನಂತರ ಮಾನ್ಯ ನ್ಯಾಯಾಲಯವು ಸದರಿ ಸವಿಸ್ತಾರವಾದ ವಿಚಾರಣೆಯನ್ನು ನಡೆಸಿ, ಆರೋಪಿ ಬಸವರಾಜ ಈತನ ಮೇಲೆ ವಿಚಾರಣೆಯಲ್ಲಿ ಸಾಕ್ಷಾಧಾರಗಳು ಕಂಡುಬಂದಿದ್ದರಿಂದ ಆರೋಪಿತನು ದೋಷಿ ಎಂದು ನಿರ್ಣಯಿಸಿ, ನಿನ್ನೆ ಅಂದರೆ (ಸೆ.18 ರಂದು) ಆರೋಪಿಗೆ ಕಲಂ. 376(3) ಐ.ಪಿ.ಸಿ ಹಾಗೂ ಕಲಂ, 6 ಪೊಷ್ಟೋ ಕಾಯ್ದೆ ಅಡಿಯ ಅಪರಾಧಕ್ಕೆ ಒಟ್ಟು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20,000ರೂ.ಗಳನ್ನು ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದೆ.
ನ್ಯಾಯಾಲಯದಲ್ಲಿ ಅಭಿಯೋಜನ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕಿ ಗೌರಮ್ಮ ಎಲ್, ದೇಸಾಯಿ ರವರು ವಾದವನ್ನು ಮಂಡಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಲು ತನಿಖೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಶ್ಲಾಘನೆ ವ್ಯಕ್ತಪಡಿಸಿದೆ.