ಪ್ರಜಾವೀಕ್ಷಣೆ ಸುದ್ದಿಜಾಲ :-
ಆಸ್ತಿಗಾಗಿ ಅಣ್ಣ-ತಂಗಿ ಜಗಳ : ತಂಗಿಯನ್ನೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಅಣ್ಣ..!
PV NEWS- ಗದಗ : ಮುಂಡರಗಿ ತಾಲೂಕಿನಲ್ಲಿ ಆಸ್ತಿಗಾಗಿ ತಕರಾರು ತೆಗೆದ ತಂಗಿಯನ್ನೇ ಚಾಕುವಿನಿಂದ ಚುಚ್ಚಿ ಹತ್ಯೆಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಈ ಘಟನೆ ನಡೆದಿದೆ. ಕಾಳಮ್ಮ ಕ್ಯಾದಿಗೆಹಳ್ಳಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಕಾಳಮ್ಮನ ಅಣ್ಣ ಈಶ್ವರಪ್ಪ ಕ್ಯಾದಿಗೇಹಳ್ಳಿ ಹತ್ಯೆ ಕೊದಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
ಆಸ್ತಿ ವ್ಯಾಜ್ಯ ವಾಪಾಸ್ ಪಡೆಯುವಂತೆ ಕೇಳಲು ಮನೆಗೆ ಹೋಗಿದ್ದ ಆರೋಪಿ ಈಶ್ವರಪ್ಪ, ಮಾತು ಕೇಳದಿದ್ದಕ್ಕೆ ಚಾಕುವಿನಿಂದ ಚುಚ್ಚಿ ತಂಗಿ ಕಾಳಮ್ಮನನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಿಕ ಆಕೆಯನ್ನು ಹತ್ಯೆಮಾಡಿ ಕುತ್ತಿಗೆ ಮೇಲೆ ಕಾಲಿಟ್ಟು ಆರೋಪಿ ಈಶ್ವರಪ್ಪ ವಿಕೃತಿ ಮೆರದಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ 15 ಎಕರೆ ಜಮೀನು ವಿಚಾರವಾಗಿ ಆರಂಬವಾಗಿದ್ದ ಜಗಳ ಕೋಲೆಯಲ್ಲಿ ಅಂತ್ಯವಾಗಿದೆ. ಪಿತ್ರಾರ್ಜಿತ ಆಸ್ತಿಗಾಗಿ ಕಾಳಮ್ಮ ಅಲಿಯಾಸ್ ಖರ್ಷಿದಾ ಕೇಸ್ ದಾಖಲಿಸಿದ್ದರು ಎನ್ನಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ಮೆಹಬೂಬ್ ಬೆಟಗೇರಿ ಎಂಬಾತನೊಂದಿಗೆ ಮೃತಳು ಮದುವೆಯಾಗಿದ್ದಳು ಎನ್ನಲಾಗಿದೆ.
‘ಮದ್ವೆಯಾಗಿ ಹೋಗಿದ್ದೀಯಾ ಈಗ ಆಸ್ತಿ ಮೇಲೇಕೆ ಕಣ್ಣು ಅಂತಾ ತಗಾದೆ ತೆಗೆದಿದ್ದ ಎಂದು ಅಣ್ಣ ಈಶ್ವರಪ್ಪ ಅವಾಚ್ಯ ಶಭ್ದಗಳಿಂದ ಆಕೆಯನ್ನು ಬೈದಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಮುಂಡರಗಿ ಪೊಲೀಸರಿಂದ ತನಿಖೆ ಆರಂಭವಾಗಿದೆ.
ವರದಿ: ವೀರೇಶ್ ಗುಗ್ಗರಿ