ತಿರುಪತಿ ಲಡ್ಡು ವಿವಾದ : ತನಿಖೆ ನಡೆಸಲು ‘ಆಂಧ್ರ ಸರ್ಕಾರ’ದಿಂದ ‘SIT’ ರಚನೆ
PV NEWS-ಅಮರಾವತಿ : ದೇಶಾದ್ಯಂತ ಮುನ್ನೆಲೆಗೆ ಬಂದಿದ್ದ ತಿರುಪತಿ ದೇವಸ್ಥಾನಕ್ಕೆ ಪ್ರಸಾದ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ಬಗ್ಗೆ ತನಿಖೆ ನಡೆಸಲು ಇದೀಗ ಆಂಧ್ರಪ್ರದೇಶ ಸರ್ಕಾರ ಇಂದು (ಮಂಗಳವಾರ) ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಈ ಕುರಿತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ನಿಟ್ಟಿನಲ್ಲಿ ಘೋಷಣೆ ಮಾಡಿದ ಎರಡು ದಿನಗಳ ಬಳಿಕ ಎಸ್ಐಟಿ ರಚನೆ ಬಂದಿದೆ.