LOCAL NEWS : ಕುಕನೂರು ಎಪಿಎಂಸಿಯಲ್ಲಿ ವಾರದಲ್ಲಿ ಮೂರು ದಿನ ರೈತರ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭ!!

You are currently viewing LOCAL NEWS : ಕುಕನೂರು ಎಪಿಎಂಸಿಯಲ್ಲಿ ವಾರದಲ್ಲಿ ಮೂರು ದಿನ ರೈತರ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭ!!

ಪ್ರಜಾವೀಕ್ಷಣೆ ಸುದ್ದಿ-

ಕುಕನೂರು ಎಪಿಎಂಸಿಯಲ್ಲಿ ವಾರದಲ್ಲಿ ಮೂರು ದಿನ ರೈತರ ಉತ್ಪನ್ನಗಳಿಗೆ ಇ-ಟೆಂಡರ್ ಪ್ರಾರಂಭ

ಕುಕನೂರು : ರೈತರ ಪ್ರತಿಭಟನೆ ನಂತರ ಎಚ್ಚೆತ್ತುಕೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಇನ್ನು ಮುಂದೆ ಎಪಿಎಂಸಿ ಪ್ರಾಂಗಣದಲ್ಲಿ ರೈತರ ಆದಿಸೂಚಿತ ಕೃಷಿ ಉತ್ಪನ್ನಗಳಿಗೆ ವಾರದಲ್ಲಿ ಮೂರು ದಿನ ಇ-ಟೆಂಡ‌ರ್ ನಡೆಸಲು ಪ್ರಕಟಣೆ ಹೊರಡಿಸಿದ್ದಾರೆ.

ಮೊನ್ನೆಯಷ್ಟೇ ಕುಕನೂರು ತಾಲೂಕಿನ ರೈತರು ಬ್ರಹತ್‌ ಸಂಖ್ಯೆಯಲ್ಲಿ ಸೇರಿ ಟೆಂಡರ್‌ ನಡೆಸಲು ಮತ್ತು ಎಪಿಎಂಸಿ ಅಧಿಕಾರಿಗಳು, ವರ್ತಕರ ಗೋಲ್ ಮಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಫಲಶ್ರುತಿ ಎಂಬಂತೆ ಒಂದು ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುದುವಾರ, ಶುಕ್ರವಾರಗಳಂದು ಇ-ಟೆಂಡ‌ರ್ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಖರೀದಿದಾರರು ಮತ್ತು ವರ್ತಕರು ಇದಕ್ಕೆ ಸ್ಪಂದಿಸಬೇಕು, ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ತಂದು ಸ್ಪರ್ಧಾತ್ಮಕ ಬೆಲೆಯನ್ನು ಪಡೆದುಕೊಳ್ಳಲು ಕುಕನೂರು ಎಪಿಎಂಸಿ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

error: Content is protected !!