ಕನಿಷ್ಠ ಸೌಲಭ್ಯದಲ್ಲಿಯೇ ಕರ್ತವ್ಯ ನಿರ್ವಹಣೆ : ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ .

ಕನಿಷ್ಠ ಸೌಲಭ್ಯದಲ್ಲಿಯೇ ಕರ್ತವ್ಯ ನಿರ್ವಹಣೆ : ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ .

ಕುಕನೂರು : ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಎಂದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಸೇವೆಯ ಪರಿಮಿತಿಯ ಕಡಿತ ಮತ್ತು ಕೆಲಸದ ಒತ್ತಡ ಕಡಿಮೆಗೊಳಿಸುವುದು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಅಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ದೇಶನದಂತೆ ಕುಕನೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟ ಧರಣಿ ಕೈಕೊಂಡಿದ್ದಾರೆ.

ಕುಕನೂರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಮ್ಮ ಕನಿಷ್ಠ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.

ಕರ್ತವ್ಯ ನಿರ್ವಹಿಸಲು ನಿಗದಿತ ಕಚೇರಿಗಳಿಲ್ಲ, ಟೇಬಲ್, ಕುರ್ಚಿ ವ್ಯವಸ್ಥೆ ಇಲ್ಲಾ, ಪೀಠೋಪಕರಣಗಳು, ಸೇರಿದಂತೆ ಅವಶ್ಯಕ ಮೂಲಭೂತ ಸೌಲಭ್ಯಗನ್ನೆ ಸರ್ಕಾರ ಒದಗಿಸಿಲ್ಲ, ಗುಣಮಟ್ಟದ ಸಲಕರಣೆಗಳು, ಮೊಬೈಲ್, ಡೇಟಾ, ಪ್ರಿಂಟರ್, ಸ್ಕ್ಯಾನರ್ ಒದಗಿಸಬೇಕು, ಅನಗತ್ಯ ಒತ್ತಡ ಕಡಿಮೆ ಮಾಡಬೇಕು ಪದೋನ್ನತಿ ಸಮಸ್ಯೆ ಬಗೆಹರಿಸಬೇಕು, ಕಚೇರಿ ಸಮಯ ಮೀರಿದ ಮೇಲೇಯೂ ಕೆಲವು ಸಲ ವರ್ಚಲ್ ಸಭೆಗಳ ಮೂಲಕ ಕೆಲಸದ ಒತ್ತಡ ಹೆರಲಾಗುತ್ತಿದ್ದು ಇದನ್ನು ಕಡಿಮೆ ಮಾಡಬೇಕು, ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ಬೇಡಿಕೆ ಈಡೇರದ ಹಿನ್ನೆಲೆ ಇಂದಿನಿಂದ ಅನಿರ್ದಿಷ್ಟ ಮುಷ್ಕರ ರಾಜ್ಯದೆಲ್ಲೆಡೆ ಮಾಡುತ್ತಿದ್ದೇವೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕ್ಯಾದಾಗುಪ್ಪಿ ಹೇಳಿದರು.

ಗ್ರಾಮ ಆಡಳಿತ ಅಧಿಕಾರಿ ರಾಣಿ ಹಳ್ಳಿ ಮಾತನಾಡಿ, ರಾಜ್ಯ ಸಂಘದ ನಿರ್ದೇಶನದಂತೆ ತಾಲೂಕಿನಲ್ಲಿ ಶಾಂತಿಯುತ ಮುಷ್ಕರ ಹಮ್ಮಿಕೊಂಡಿದ್ದು, 17 ಆಪ್ ಗಳ ಮೂಲಕ ಪ್ರಗತಿ ಸಾಧಿಸುವಂತೆ ಮೇಲಧಿಕಾರಿಗಳ ಒತ್ತಡ ಬರುತ್ತಿದೆ,ಆದರೆ ಅದಕ್ಕೆ ಬೇಕಾದ ಮೊಬೈಲ್, ಇಂಟರ್ನೆಟ್ ಸೇವೆ, ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ, ಸರ್ಕಾರ ಇತ್ತ ಗಮನಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ್ ಗೌಡ, ವೀರಣ್ಣ ತೆಂಗಿನಕಾಯಿ, ಪೀರ್ ಸಾಬ್ ಲಕ್ಕುಂಡಿ,ಶರಣಪ್ಪ, ಮಹಾಂತೇಶ್, ಶಿಲ್ಪಾ, ಜಯಶ್ರೀ, ದೇವಮ್ಮ, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಮಹಮ್ಮದ್ ಸಾಬ್ ಕಕ್ಕಿಹಳ್ಳಿ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!