ಬರ್ಚಿ ಎಸೆತದಲ್ಲಿ ರಾಜ್ಯ44ಮಟ್ಟಕ್ಕೆ ಆಯ್ಕೆಯಾದ ಭಾಗ್ಯಲಕ್ಷ್ಮಿ ಯರಗೇರಿ!
ಕೊಪ್ಪಳ : ಇಂದು ಕೊಪ್ಪಳದಲ್ಲಿ ನಡೆದ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದ ಬಚ್ಚಿ ಎಸೆತದಲ್ಲಿ ಭಾಗ್ಯಲಕ್ಷ್ಮಿ ಯರಗೇರಿ ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಾಗ್ಯಲಕ್ಷ್ಮಿ ಯರಿಗೇರಿ ವಿದ್ಯಾರ್ಥಿನಿಯು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಈ ವಿದ್ಯಾರ್ಥಿಯ ಸಾಧನೆಯಿಂದಾಗಿ ಕಾಲೇಜಿನ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿ ವರ್ಗ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.