BREAKING : ವಿದ್ಯುತ್ ಅಪಘಾತ : ಕರೆಂಟ್ ಶಾಕ್ ಹೊಡೆದು ಓರ್ವ ವ್ಯಕ್ತಿ ಸಾವು..!!

You are currently viewing BREAKING : ವಿದ್ಯುತ್ ಅಪಘಾತ : ಕರೆಂಟ್ ಶಾಕ್ ಹೊಡೆದು ಓರ್ವ ವ್ಯಕ್ತಿ ಸಾವು..!!

ಪ್ರಜಾ ವೀಕ್ಷಣೆ ಸುದ್ದಿ :-

ಕರೆಂಟ್ ಶಾಕ್ ಹೊಡೆದು ಓರ್ವ ವ್ಯಕ್ತಿ ಸಾವು 

ಶಿರಹಟ್ಟಿ : ಇಂದು ಪಟ್ಟಣದ ಹೊರ ವಲಯದಲ್ಲಿ ಲೇಔಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಸಿ ಓರ್ವ ವ್ಯಕ್ತಿ  ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಶಿರಹಟ್ಟಿಯಿಂದ ಸೊರಟೂರು ರಸ್ತೆಗೆ ಹೊಂದಿಕೊಂಡಿರುವ ಕಪ್ಪತ್ನವರ್ ಲೇಔಟಿನಲ್ಲಿ ಕೆಲಸ ಮಾಡುತ್ತಿರುವ ಐದು-ಆರು ಜನ ಕೂಲಿ ಕಾರ್ಮಿಕರಿಗೆ ಕರೆಂಟ್  ಶಾಕ್  ಹೊಡೆದಿದೆ. ಅದರಲ್ಲಿ ಕೆಲವರು ಪಾರಾಗಿದ್ದು, ಓರ್ವ ವ್ಯಕ್ತಿಯನ್ನು ತಾಲೂಕ ಆಸ್ಪತ್ರೆ ದಾಖಲಿಸಿದ್ದಾರೆ.

ಈ ವೇಳೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಸೋಮಪ್ಪ ಚಲವಾದಿ (ವಯಸ್ಸು-26) ಮೃತ ಪಟ್ಟಿರುತ್ತಾನೆ ಎಂದು ತಿಳಿದು ಬಂದಿದೆ.ಈತನು ನವಲಗುಂದ ತಾಲೂಕಿನ ಪಡೆಸೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಕೂಡಲೇ ತಾಲೂಕ್ ಆಸ್ಪತ್ರೆಗೆ ಧಾವಿಸಿದ ಪಿಎಸ್ಐ ಶಿವಾನಂದ ಲಮಾಣಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!