ಯಲಬುರ್ಗಾ
ಕ್ಷೇತ್ರದ,ಮತ್ತು ರಾಜ್ಯದ ಮತದಾರನ್ನು ದಾರಿ ತಪ್ಪಿಸುತ್ತಾ, ಅವರಿಗೆ ಸೀರೆ, ಹಣ, ಕುಕ್ಕರ್ ಇನ್ನೂ ಹಲವಾರು ಆಮಿಷಗಳನ್ನು ನೀಡುತ್ತಾ ಅವರನ್ನು ತಮ್ಮತ್ತ ಸೆಳೆದು ಮತ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇದೇ ತಿಂಗಳು 13ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕರೆದ ಪೂರ್ವಭಾವಿ ಸಭೆ ಹಾಗೂ ವಿವಿಧ ಗ್ರಾಮದ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನ ಸಾಮಾನ್ಯನಿಗೆ ಉನ್ನತ ಹುದ್ದೆ ನೀಡಿದ ಪಕ್ಷ ಯಾವುದಾದರೂ ರಾಷ್ಟ್ರದಲ್ಲಿದೆ ಎಂದರೇ ಅದು ನಮ್ಮ ಕಾಂಗ್ರೆಸ್ ಪಕ್ಷ, ಮೀಸಲಾತಿಗಳಲ್ಲಿ ದ್ರೋಹವನ್ನು ಮಾಡುತ್ತಾ ರಾಜಕಾರಣ ಮಾಡುತ್ತಿರುವ ಬಿಜೆಪಿಗರೂ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಧೂಳಿಪಟವಾಗಲಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 130ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಲಪ್ಪ ಆಚಾರ ನಮ್ಮ ಕ್ಷೇತ್ರಕ್ಕೆ ಒಂದು ಅಂಗನವಾಡಿ ಮಾಡಲಾಗಲಿಲ್ಲ, 5ವರ್ಷದ ಆಡಳಿತದಲ್ಲಿ ವಿಧಾನಸಭೆಯಲ್ಲಿ ಏಷ್ಟು ಸಮಯ ಮಾತನಾಡಿದ್ದಾರೇ ಎನ್ನುವದು ನನಗೆ ಗೊತ್ತು, ಅವರು ಅಧಿಕಾರ ದಾಹ ಮತ್ತು ತಮ್ಮ ವ್ಯವಹಾರಕ್ಕಾಗಿ ವಾಮ ಮಾರ್ಗದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹಾಲಪ್ಪನಿಗೆ ಈ ಬಾರಿ ಅವರ ಪಕ್ಷದಿಂದ ಟಿಕೇಟು ಸಿಗತ್ತೋ ಇಲ್ವೋ ಅವರಿಗೆ ಗೊತ್ತಿಲ್ಲಾ ಎಂದು ವ್ಯಂಗ್ಯವಾಡಿದರು.
ಏ.13ರಂದು ವಿದ್ಯಾನಂದ ಗುರುಕುಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಸಾಯಂಕಾಲ 5ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಏ 17ರಂದು ನಾವು ನಾಮ ಪತ್ರ ಸಲ್ಲಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರ,ವೀರನಗೌಡ ಬಳೂಟಗಿ, ಟಿ.ರತ್ನಾಕರ, ಖಾಸಿಂಸಾಬ ತಳಕಲ್,ಹಂಪಯ್ಯ, ಸಂಗಮೇಶ ಗುತ್ತಿ, ಗಗನ ನೋಟಗಾರ ಇನ್ನಿತರರು ಇದ್ದರು.
ವರದಿ : ಪಂಚಯ್ಯ ಹಿರೇಮಠ