LOCAL NEWS : ನೂತನ ಡಿಡಿಪಿಐಯಾಗಿ ಆರ್ ಎಸ್ ಬುರುಡಿ ಆಗಮನ : ತಾಲೂಕ ಬಣಜಿಗ ಸಂಘದ ಅಧ್ಯಕ್ಷ ರಿಂದ ಸನ್ಮಾನ!
ಶಿರಹಟ್ಟಿ : ಜಿಲ್ಲೆಯ ಶಿಕ್ಷಣ ಇಲಾಖೆಗೆ ಹೊಸದಾಗಿ ಉಪನಿರ್ದೇಶಕರಾಗಿ ಪದವಿ ಹೊಂದಿದ ಆರ್ ಎಸ್ ಬುರುಡಿ ಅವರಿಗೆ ಶಿರಹಟ್ಟಿ ಪಟ್ಟಣದ ತಾಲೂಕ ಬಣಜಿಗ ಸಮಾಜದ ಅಧ್ಯಕ್ಷರಾದ ಮುತ್ತಣ್ಣ ಮಜ್ಜಿಗೆ ಅವರು ಗದಗಿನ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಮುತ್ತಣ್ಣ ಮಜ್ಜಿಗೆ ಅವರು ಆರ್ ಎಸ್ ಬುರುಡಿ ಯವರು ಶಿರಹಟ್ಟಿಯ ಅಖಂಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರ ಭಗವ ಸಹೋದ್ಯೋಗಿಗಳ ಮನದಲ್ಲಿ ಮನೆ ಮಾತಾಗಿದ್ದ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಹೊಂದಿ ಶಿರಹಟ್ಟಿ ತಾಲೂಕಿನ ಹೆಸರನ್ನು ಎತ್ತಿ ತೋರಿಸಿದರು.
ತಾಲೂಕಿನ ಶಿಕ್ಷಣಾಧಿಕಾರಿಗಳಾಗಿ ಸಲ್ಲಿಸಿದ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲೆಗೆ ಡಿ ಡಿ ಪಿ ಐ ನೇಮಕ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅಧ್ಯಕ್ಷರಾದ ಮುತ್ತಣ್ಣ ಮಜ್ಜಿಗಿ ಖುಷಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಚ್ ಆರ್ ಬೇನಾಳ, ಶಿವಯೋಗಿ ಪಟ್ಟಣಶೆಟ್ಟಿ ಹಾಗೂ ಎಸ್ ಎಸ್ ಸಾಮ್ರಾಟ ಭಾಗಿಯಾಗಿದ್ದರು.